ನವದೆಹಲಿ: ಟ್ವಿಟರ್ ಎಲ್ಲರಿಗೂ ಉಚಿತವಾಗಿಲ್ಲ ಎಂದು ಹೇಳುವ ಮೂಲಕ ಎಲೋನ್ ಮಸ್ಕ್ ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಶುಲ್ಕದ ಬಗ್ಗೆ ಸುಳಿವು ನೀಡಿದ್ದಾರೆ.
ಹೆಚ್ಚಿನ ಅಮೆರಿಕನ್ನರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನ ವ್ಯಾಪ್ತಿಯನ್ನು ಹೆಚ್ಚಿಸಲು ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಟ್ವಿಟರ್ ಸ್ವಲ್ಪ ಶುಲ್ಕವನ್ನು ವಿಧಿಸಬಹುದು ಎಂಬ ಪ್ರಮುಖ ಸುಳಿವನ್ನು ಎಲೋನ್ ಮಸ್ಕ್ ನೀಡಿದ್ದಾರೆ.
ಸಾಂದರ್ಭಿಕ ಬಳಕೆದಾರರಿಗೆ Twitter ಯಾವಾಗಲೂ ಉಚಿತವಾಗಿರುತ್ತದೆ. ಟ್ವಿಟರ್ ಯಾವಾಗಲೂ ಕ್ಯಾಶುಯಲ್ ಬಳಕೆದಾರರಿಗೆ ಉಚಿತವಾಗಿರುತ್ತದೆ, ಆದರೆ ವಾಣಿಜ್ಯ / ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ವೆಚ್ಚವಾಗಬಹುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.