ಸಾಮಾಜಿಕ ಜಾಲ ತಾಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್ ಹೊಸ ಸೇವೆಯನ್ನು ಬಳಕೆದಾರರಿಗೆ ನೀಡಲು ತಯಾರಿ ನಡೆಸಿದೆ. ವಿಡಿಯೋ ಹಾಗೂ ಟೆಕ್ಸ್ಟ್ ಸಂದೇಶ ಪೋಸ್ಟ್ ಮಾಡಲು ಪ್ರಸ್ತುತ ಟ್ವಿಟರ್‌ನಲ್ಲಿ ಅವಕಾಶವಿದೆ. ಇದರ ಜೊತೆಗೆ ವಾಯ್ಸ್ ಮೆಸೇಜ್ ಕಳಿಸುವ ವೇದಿಕೆಯನ್ನು ಸೃಷ್ಟಿಸುತ್ತದೆ.
ಗರಿಷ್ಠ 140 ಸೆಕೆಂಡುಗಳ ಆಡಿಯೋ ಸಂದೇಶವನ್ನು ಕಳಿಸುವ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಸ್ತುತ ಬ್ರೆಜಿಲ್‌ನಲ್ಲಿ ಪ್ರಯೋಗ ನಡೆಯುತ್ತಿದೆ. ಬಳಿಕ ಅದನ್ನು ವಿಶ್ವದಾದ್ಯಂತ ಬಳಕೆದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಮೈಕ್ರೊಫೋನ್ ಬಟನ್ ಹಾಗೂ ಪ್ಲೇ ಬಟನ್ ಪರಿಚಯಿಸುತ್ತಿದ್ದು, ಅದನ್ನು ಬಳಸಿ ರೆಕಾರ್ಡಿಂಗ್ ಮಾಡಲು ಮತ್ತು ಪ್ಲೇ ಮಾಡಬಹುದು. ಫೇಸ್ಬುಕ್ ಮತ್ತು ವಾಟ್ಸಪ್ ನಲ್ಲಿ ಈಗಾಗಲೇ ಆಡಿಯೋ ಸಂದೇಶದ ವ್ಯವಸ್ಥೆ ಇದೆ. ಅದೇ ರೀತಿ ಇಲ್ಲೂ ಕೂಡ ಜಾರಿಮಾಡಲು ಟ್ವಿಟರ್ ಹೆಚ್ಚಿನ ಹೂಡಿಕೆ ಮಾಡುತ್ತಿದೆ.