ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಫೋಟೋವೊಂದರಲ್ಲಿ ನೀರು ಮಾತ್ರವಲ್ಲ ಕುಲ್ಹದ್ ಲಸ್ಸಿ ಸಹ ಇರುವುದು ಕಂಡುಬಂದಿದೆ!!
ಹೌದು, ಪ್ರಸಿದ್ಧ ಆಹಾರ ವಿತರಣಾ ಕಂಪನಿ ಝೋಮ್ಯಾಟೋ ಹೀಗೊಂದು ಅಪರೂಪದ ಚಿತ್ರವನ್ನು ತಯಾರಿಸಿ ಆಹಾರದ ಮೇಲೆ ತನ್ನ ಪ್ರೀತಿಯನ್ನು ತೋರಿದೆ. ಮಂಗಳನ ಮೇಲಿನ ಗುಂಡಿಯೊಂದರಲ್ಲಿ ಕುಲ್ಹದ್ ಲಸ್ಸಿ ತುಂಬಲಾಗಿದೆ. ಅಲ್ಲಿಯೂ ತಂಪನೆಯ ವಾತಾವರಣ ಸೃಷ್ಟಿಸುತ್ತೇವೆ ಎಂಬ ಅರ್ಥವನ್ನು ಚಿತ್ರ ನೀಡುವಂತಿದೆ.
ಲೇಟೆಸ್ಟ್ ಸ್ಪೇಸ್ ಎಂಬ ಟ್ವಿಟರ್ ಬಳಕೆದಾರರು ಫೋಟೋ ಅಪ್ಲೋಡ್ ಮಾಡಿದ್ದು, “ಮಂಗಳನ ಉತ್ತರ ಧ್ರುವದಲ್ಲಿ ಅಪೂರ್ವವಾದ ತುದಿಯ ಚಿತ್ರ.-ಚಿತ್ರ ಕೃಪೆ ಯುರೋಪಿಯನ್ ಸ್ಪೇಸ್ ಏಜೆನ್ಸಿ” ಎಂದು ಬರೆದಿದ್ದಾರೆ. ಮತ್ತೆ ಅದೇ ಫೋಟೋ ರೀ ಟ್ವೀಟ್ ಮಾಡಿ “ಅದು ಕುಲ್ಹದ್ ಲಸ್ಸಿ” ಎಂದು ಬರೆದಿದ್ದಾರೆ. ಝೋಮ್ಯಾಟೋದ ಆಹಾರ ಪ್ರೀತಿಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
https://twitter.com/ZomatoIN/status/1269885130283286528?ref_src=twsrc%5Etfw%7Ctwcamp%5Etweetembed%7Ctwterm%5E1269885130283286528&ref_url=https%3A%2F%2Fwww.news18.com%2Fnews%2Fbuzz%2Ftwitter-has-a-fun-time-after-zomato-compares-a-crater-on-mars-with-kulhad-lassi-2662933.html
https://twitter.com/ZomatoIN/status/1270427154321485827?ref_src=twsrc%5Etfw%7Ctwcamp%5Etweetembed%7Ctwterm%5E1270427154321485827&ref_url=https%3A%2F%2Fwww.news18.com%2Fnews%2Fbuzz%2Ftwitter-has-a-fun-time-after-zomato-compares-a-crater-on-mars-with-kulhad-lassi-2662933.html