ಈ 7 ಅಕ್ಷರ ಟೈಪ್ ಮಾಡಿದ್ರೆ ನಿಮ್ಮ ಟ್ವಿಟರ್ ಖಾತೆಯಾಗುತ್ತೆ ಲಾಕ್ 16-03-2021 8:17AM IST / No Comments / Posted In: Business, Latest News Memphis ಎಂಬ ಶಬ್ದವನ್ನ ಟ್ವೀಟ್ ಮಾಡಿದ ಸಾಕಷ್ಟು ಟ್ವೀಟಿಗರ ಖಾತೆಗಳು ಅಚಾನಕ್ ಆಗಿ ಸಸ್ಪೆಂಡ್ ಆಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ. ಈ 7 ಅಕ್ಷರದ ಶಬ್ದವನ್ನ ಬಳಕೆ ಮಾಡಿದ ನಮ್ಮ ಖಾತೆ ಅಮಾನತ್ತಾಗಿದೆ ಎಂದು ಟ್ವೀಟಿಗರು ವರದಿ ಮಾಡಿದ್ದಾರೆ. Memphis ಎಂದು ಟ್ವೀಟ್ ಮಾಡಿದ ಟ್ವಿಟರ್ ಬಳಕೆದಾರರಿಗೆ ಟ್ವಿಟರ್ ಮೆಸೇಜ್ ಮಾಡಿದ್ದು 12 ಗಂಟೆಗಳ ಕಾಲ ನಿಮ್ಮ ಖಾತೆ ಲಾಕ್ ಆಗಲಿದೆ ಎಂದು ಮಾಹಿತಿ ನೀಡಿದೆ. ನೀವು ಇತರೆ ಜನರ ಖಾಸಗಿ ಮಾಹಿತಿಯನ್ನ ಅವರ ಅನುಮತಿ ಇಲ್ಲದೇ ಪ್ರಕಟಿಸಲು ಅಥವಾ ಪೋಸ್ಟ್ ಮಾಡಲು ಅವಕಾಶ ಇಲ್ಲ ಎಂದು ಟ್ವಿಟರ್ ಎಚ್ಚರಿಕೆ ಸಂದೇಶ ಕಳುಹಿಸಿದೆ. ಈ ಸಮಸ್ಯೆಯ ಬಗ್ಗೆ ಭಾನುವಾರ ಹಲವಾರು ಮಂದಿ ವರದಿ ಮಾಡಿದ ಬಳಿಕ ಟ್ವಿಟರ್ ದೋಷದಿಂದ ಈ ಸಮಸ್ಯೆ ಉಂಟಾಗಿದ್ದು ಇದನ್ನ ಸರಿಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ತಾಂತ್ರಿಕ ದೋಷದಿಂದ Memphis ಎಂದು ಟೈಪ್ ಮಾಡಿದವರ ಖಾತೆ ತಾತ್ಕಾಲಿಕವಾಗಿ ಸಸ್ಪೆಂಡ್ ಆಗಿದೆ, ಈ ದೋಷವನ್ನ ಸರಿಪಡಿಸಿ ಖಾತೆಗಳನ್ನ ಸಕ್ರಿಯಗೊಳಿಸಿದ್ದೇವೆ ಎಂದು ಹೇಳಿದೆ. ಡಚ್ನ ಸಾಕರ್ ಆಟಗಾರ ಮೆಂಫಿಸ್ ಡಿಪೇ ಬಗ್ಗೆ ಟ್ವೀಟ್ ಮಾಡಲು ಹೋದ ಬಳಕೆದಾರರಿಗೆ ಈ ಸಮಸ್ಯೆ ಮೊದಲು ಉಂಟಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ. ಹೀಗಾಗಿ ಒಲಿಂಪಿಕ್ ಲಿಯೋನೈಸ್ ತನ್ನ ಅಧಿಕೃತ ಖಾತೆಯಲ್ಲಿ ಮೆಂಫಿಸ್ ಫೋಟೋ ಶೇರ್ ಮಾಡಿ ಟ್ವಿಟರ್ ನಾವಿನ್ನು ಇವರ ಬಗ್ಗೆ ಮಾತನಾಡಬಹುದೇ..? ಎಂದು ವ್ಯಂಗ್ಯ ಮಾಡಿದೆ. Hey, @Twitter – can we talk about him yet? 😄 pic.twitter.com/nVn3nY9zBb — Olympique Lyonnais 🇬🇧🇺🇸 (@OL_English) March 14, 2021