ನವದೆಹಲಿ: 2021 ರಲ್ಲಿ ಹೊಸ ಟಿವಿ ಖರೀದಿಸಬೇಕೆಂದು ಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಬಿಡಿಭಾಗಗಳ ಬೆಲೆ ಹೆಚ್ಚಳ ಮತ್ತು ಸಾಗಣೆ ಸಮಸ್ಯೆ ಕಾರಣದಿಂದ ಈ ತ್ರೈಮಾಸಿಕದಲ್ಲಿ ಟಿವಿ ಸೆಟ್ ಗಳ ದರ ಏರಿಕೆಯಾಗುವ ಸಾಧ್ಯತೆ ಇದೆ.
ಎಲ್ಸಿಡಿ ಪ್ಯಾನಲ್ ಗಳಿಗೆ ಅಗತ್ಯವಾಗಿ ಬೇಕಾದ ಸಂಯೋಜಿತ ಸರ್ಕ್ಯೂಟ್ ಗಳ ಪೂರೈಕೆ ಮತ್ತು ಕಚ್ಚಾ ವಸ್ತುಗಳ ದರ ಹೆಚ್ಚಳವಾಗಿದ್ದು, ಟಿವಿ ಸೆಟ್ ಗಳ ಬೆಲೆ ಏರಿಕೆಯಾಗಲಿದೆ. ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಗಲಿದೆ.
32 ಇಂಚಿನ ಟಿವಿ ಪ್ಯಾನಲ್ ಗೆ 33 ರಿಂದ 35 ಡಾವಲರ್ ವರೆಗೆ ದರ ಇದ್ದು, ಇದು 60 ರಿಂದ 65 ರ ಡಾಲರ್ಗೆ ಏರಿಕೆಯಾಗಿದೆ. ಪರಿಣಾಮ ಟಿವಿ ಬೆಲೆ ಶೇಕಡ 20 ರಿಂದ 30 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.