ಟಿವಿ, ಫ್ರಿಜ್, ಎಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಈಗ್ಲೇ ಖರೀದಿ ಮಾಡಿ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್‌ನ ವರದಿಯ ಪ್ರಕಾರ, 2021 ರಲ್ಲಿ ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಈ ಬೆಲೆ ಏರಿಕೆ ಉಪಕರಣಗಳ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಲಿದೆ.
ಮೋತಿಲಾಲ್ ಓಸ್ವಾಲ್ ಹಣಕಾಸು ಸೇವಾ ವರದಿಯ ಪ್ರಕಾರ, ಏಪ್ರಿಲ್ 2021 ರಲ್ಲಿ ಕೋರ್ ಕಮೊಡಿಟಿ ಸಿಆರ್ಬಿ ಸೂಚ್ಯಂಕವು ಶೇಕಡಾ 70 ರಷ್ಟು ಏರಿಕೆಯಾಗಿದೆ. ಗ್ರಾಹಕ ಬಾಳಿಕೆ ವಸ್ತುಗಳ ಮೇಲೆ ಇದರ ಪರಿಣಾಮ ಕಂಡುಬರಲಿದೆ. ಈ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸರಕುಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿ, ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್ ಮೆಷಿನ್, ವಾಟರ್ ಹೀಟರ್ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆ ಶೇಕಡಾ 10ರಿಂದ15ರಷ್ಟು ಹೆಚ್ಚಾಗಲಿದೆ. ವರದಿಯ ಪ್ರಕಾರ, ಈ ವರ್ಷದ ಜುಲೈ ಮಧ್ಯದಿಂದ ಬೆಲೆಗಳು ಹೆಚ್ಚಾಗಲಿವೆ.
ಈ ಉಪಕರಣಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ಲಾಕ್ ಡೌನ್ ನಿಂದಾಗಿ ಅನೇಕ ಕಂಪನಿಗಳು ಬಾಗಿಲು ಮುಚ್ಚಿದ್ದವು. ಹಾಗಾಗಿ ವಸ್ತುಗಳ ಕೊರತೆ ಜೊತೆ ಲೋಹದ ಬೆಲೆ ಹೆಚ್ಚಳ ಈ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.