
ಸ್ನಾತಕೋತ್ತರ ಪದವೀಧರೆಯಾಗಿರುವ ಪೂಜಾ ಬಾದಾಮಿಕರ್, ಕಳೆದ ಎರಡು ವರ್ಷಗಳಿಂದ ಹಾಳಾದ ಟೈರ್ಗಳಿಂದ ಸುಂದರವಾದ ಪಾದರಕ್ಷೆಗಳನ್ನ ತಯಾರಿಸುವ ಉದ್ಯಮಕ್ಕೆ ಪುಷ್ಠಿ ನೀಡುತ್ತಾ ಬಂದಿದ್ದಾರೆ. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆ ಆಗುತ್ತೆ ಅಂತಾರೆ ಪೂಜಾ ಬಾದಾಮಿಕರ್.
ಈ ವಿಚಾರವಾಗಿ ಮಾತನಾಡಿದ ಪೂಜಾ ಬಾದಾಮಿಕರ್, ಸಂಪೂರ್ಣ ವಿಶ್ವದಲ್ಲಿ ವರ್ಷಕ್ಕೆ ಒಂದು ಬಿಲಿಯನ್ ಟೈರ್ಗಳು ತ್ಯಾಜ್ಯವಾಗಿ ಮಾರ್ಪಾಡಾಗುತ್ತೆ. ಹೀಗಾಗಿ ನಾನು ಸ್ಥಳೀಯ ಚಮ್ಮಾರರನ್ನ ಒಂದುಗೂಡಿಸಿ ಅವರ ಸಹಾಯದಿಂದ ಪರಿಸರ ರಕ್ಷಣೆಗೆ ಸಣ್ಣ ಕೊಡುಗೆ ನೀಡುತ್ತಿದ್ದೇನೆ ಎಂದು ಹೇಳಿದ್ರು.