ನವದೆಹಲಿ: ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಲ್ಲಿ ವಿಮೆ ಕವರೇಜ್ ನೀಡಲು IRDAI ಆರೋಗ್ಯ ವಿಮೆ ಒದಗಿಸುವ ಕಂಪನಿಗಳಿಗೆ ಅನುಮತಿ ನೀಡಿದೆ.
ಆರೋಗ್ಯ ವಿಮೆ ಒದಗಿಸುವ ಕಂಪನಿಗಳಿಗೆ ವಿಮೆ ವಲಯದ ನಿಯಂತ್ರಕ IRDAI ವತಿಯಿಂದ ಈ ಕುರಿತಾಗಿ ಸೂಚನೆ ನೀಡಲಾಗಿದ್ದು, ಹೊಸದಾಗಿ ಅಥವಾ ಈಗಾಗಲೇ ಇರುವ ವಿಮೆಗಳೊಂದಿಗೆ ಹೆಚ್ಚುವರಿಯಾಗಿ ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ಪಡೆಯುವ ಪಾಲಿಸಿದಾರರಿಗೆ ವಿಮೆ ಕವರೇಜ್ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಆಸ್ಪತ್ರೆಯಲ್ಲಿ ದಾಖಲಾಗದೇ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ ವಿಮೆ ಸೌಲಭ್ಯ ವಿಸ್ತರಿಸಬಹುದು. ಪ್ರತಿ ದಿನದ ಚಿಕಿತ್ಸೆ ಕುರಿತಾಗಿ ವೈದ್ಯರ ದೃಢೀಕರಣ ಹೊಂದಿರಬೇಕು. ಕೋವಿಡ್ ಸಂದರ್ಭದಲ್ಲಿ ಬೆಡ್ ಕೊರತೆಯಿಂದಾಗಿ ಅನೇಕರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದು, ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.