ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್ ಕೋಡ್ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ತೋರುವುದು ಕಡ್ಡಾಯವಾಗಿದೆ.
ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ ವರದಿಯನ್ನು ಸಂಬಂಧಪಟ್ಟ ಸಿಬ್ಬಂದಿಗೆ ತೋರುವ ಮೂಲಕ ಸುಳ್ಳು ನೆಗೆಟಿವ್ ವರದಿ ನೀಡುವುದನ್ನು ತಪ್ಪಿಸಲು ಮುಂದಾಗಲಾಗಿದೆ.
ಬಹಳಷ್ಟು ಪ್ರಯಾಣಿಕರು ತಮಗೆ ಕೋವಿಡ್ ಇಲ್ಲವೆಂದು ಸುಳ್ಳು ಪತ್ರಗಳನ್ನು ತೋರಿದ್ದು ಬೆಳಕಿಗೆ ಬಂದ ಬಳಿಕ ಈ ಸಂಬಂಧ ಘೋಷಣೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, “22 ಮೇ 2021ರ 00:01 ಗಂಟೆಯ ಬಳಿಕ ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ವಿಮಾನಗಳನ್ನು ಏರಲಿಚ್ಛಿಸುವ ಪ್ರಯಾಣಿಕರಿಂದ ಕ್ಯೂಆರ್ ಕೋಡ್ ಇರುವ ನೆಗೆಟಿವ್ ಆರ್‌ಟಿಪಿಸಿಆರ್ ಪತ್ರ ಪಡೆಯಬೇಕೆಂದು ವಿಮಾನಯಾನ ಸೇವಾದಾರರಿಗೆ ಸೂಚಿಸಲಾಗಿದೆ” ಎಂದು ಮಹತ್ವದ ಘೋಷಣೆ ಮಾಡಿದೆ.
ಕೋವಿಡ್ ಬಳಿಕ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆ ಎಂದ ಆರೋಗ್ಯ ಸಚಿವ ಸುಧಾಕರ್
ಈ ಹೊಸ ನಿಯಮದ ಸಂಬಂಧ ವಿಮಾನಯಾನ ಸೇವಾದಾರರು ತಂತಮ್ಮ ಟ್ವಿಟರ್ ಹ್ಯಾಂಡಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರಿಗೆ ವಿಷಯ ಮುಟ್ಟಿಸಿವೆ.
ಬೆಳಗಿನ ಜಾವ ಹುಡುಗಿ ಮನೆಗೆ ನುಗ್ಗಿದ ಕಾಮುಕನಿಂದ ನೀಚ ಕೃತ್ಯ
ಈ ನಿಯಮವು ಆರ್‌ಟಿ-ಪಿಸಿಆರ್ ವರದಿ ಅಗತ್ಯವಿರುವ ದೇಶಗಳಿಗೆ ಪ್ರಯಾಣಿಸುವ ದೇಶಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಸದ್ಯದ ಮಟ್ಟಿಗೆ ಭಾರತದೊಂದಿಗೆ 27 ದೇಶಗಳು ’ಏರ್ ಬಬಲ್’ ವ್ಯವಸ್ಥೆ ಮಾಡಿಕೊಂಡಿವೆ. ಇವುಗಳಲ್ಲಿ ಅಮೆರಿಕ, ಫ್ರಾನ್ಸ್, ಜರ್ಮನಿ, ಜಪಾನ್, ರಷ್ಯಾ, ಕತಾರ್ ಹಾಗೂ ಯುಎಇಗಳು ಇವೆ.