ಆಸ್ಟ್ರೇಲಿಯಾ: ಪ್ಲಾಸ್ಟಿಕ್ ಬಳಕೆಯನ್ನು ಎಷ್ಟೇ ಕಡಿಮೆ ಮಾಡಬೇಕು ಎಂದು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಪರ್ಯಾಯ ಇನ್ನೂ ಸಿಕ್ಕಿಲ್ಲದಿರುವುದೂ ಇದಕ್ಕೊಂದು ಕಾರಣ. ಆದರೆ, ಈಗ ಅದೇ ಪ್ಲಾಸ್ಟಿಕ್ ಅನ್ನು ಬಳಸಿಕೊಂಡು ಅಪ್ಪ-ಮಗನ ಜೋಡಿ ಈಗ ಸನ್ ಗ್ಲಾಸ್ ತಯಾರಿಸಿದ್ದಾರೆ.
ಆಸ್ಟ್ರೇಲಿಯಾದ 9 ವರ್ಷದ ಮಗನೊಂದಿಗೆ ಆತನ ತಂದೆ ಸೇರಿಕೊಂಡು ಪ್ಲಾಸ್ಟಿಕ್ ನಿಂದ ಸನ್ ಗ್ಲಾಸ್ ತಯಾರು ಮಾಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಒಂದೇ ಒಂದು 600 ಎಂಎಲ್ ಪ್ಲಾಸ್ಟಿಕ್ ಬಾಟಲ್ ಸಹಾಯದಿಂದ ನಿಕ್ ರಾಬಿನ್ ಸನ್ ಸನ್ ಗ್ಲಾಸ್ ಅನ್ನು ತಯಾರಿಸಿದ್ದಾರೆ. ಅದರಲ್ಲೂ ಮೂರು ಬಣ್ಣಗಳಲ್ಲಿ ರಚನೆ ಮಾಡಲಾಗಿದೆ. ಇದಕ್ಕೆ ಗುಡ್ ಸಿಟಿಜನ್ಸ್ ಎಂದು ನಾಮಕರಣ ಮಾಡಿದ್ದಾರೆ.
ಹೀಗೆ ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್ ನಿಂದ ಸನ್ ಗ್ಲಾಸ್ ಮಾಡಲು 2 ವರ್ಷವನ್ನು ತೆಗೆದುಕೊಳ್ಳಲಾಗಿದೆ ಎಂದು ನಿಕ್ ಹೇಳಿಕೊಂಡಿದ್ದು, ಇದು ಶೇಕಡಾ ನೂರಕ್ಕೆ ನೂರು ಪುನರ್ಬಳಕೆಯಿಂದ ಮಾಡಿದ್ದಾಗಿದೆ. ಅಲ್ಲದೆ, ಗುಡ್ ಸಿಟಿಜನ್ಸ್ ಕಂಪನಿಯಿಂದ ಸಮುದ್ರದ ದಡದಲ್ಲಿ ಬಂದು ಬಿದ್ದಿರುವ ಸುಮಾರು 1 ಕೆಜಿಯಷ್ಟು ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಯನ್ನು ಸಂಗ್ರಹಿಸಿ ತಂದಿದ್ದಾಗಿ ಹೇಳಿಕೊಂಡಿದೆ.