ಪಂಜಾಬ್ನಲ್ಲಿ ರೈಲು ಸೇವೆ ಪುನಾರಂಭವಾಗಿಲ್ಲ ಎಂದು ಸ್ಪಷ್ಟೀಕರಣ ನೀಡುವ ಮೂಲಕ ಕೆಲ ಸುಳ್ಳು ವದಂತಿಗೆ ರೈಲ್ವೇ ಇಲಾಖೆ ಉತ್ತರ ನೀಡಿದೆ.
ರೈತರ ಆಂದೋಲನದಿಂದಾಗಿ ಪಂಜಾಬ್ನಲ್ಲಿ ರೈಲು ಸೇವೆ ಸ್ಥಗಿತಗೊಂಡಿತ್ತು. ಆದರೆ ಕೆಲ ಪತ್ರಿಕೆಗಳು ಪಂಜಾಬ್ನಲ್ಲಿ ರೈಲು ಸೇವೆ ಪುನಾರಂಭವಾಗಿದೆ ಅಂತಾ ವರದಿ ಪ್ರಕಟಿಸಿದ್ದವು. ಈ ಊಹಾಪೋಹಗಳಿಗೆ ಉತ್ತರ ನೀಡಿದ ಉತ್ತರ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್, ಇದೊಂದು ಸುಳ್ಳು ಸುದ್ದಿ. ಪಂಜಾಬ್ನಲ್ಲಿ ರೈಲು ಸಂಚಾರಕ್ಕೆ ಚಾಲನೆ ಮಾಡಿಲ್ಲ ಅಂತಾ ಸ್ಪಷ್ಟೀಕರಣ ನೀಡಿದ್ದಾರೆ.
ಸರಕು ರೈಲಿನ ಸೇವೆಯನ್ನ ಪುನಾರಂಭ ಮಾಡಿದ್ದೆವು. ಆದರೆ ಸುರಕ್ಷತೆ ದೃಷ್ಟಿಯಿಂದಾಗಿ ಈ ಸೇವೆಯನ್ನೂ ನಿಲ್ಲಿಸಲಾಗಿದೆ ಅಂತಾ ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ.