alex Certify ಇನ್ಮುಂದೆ ಅಮೆಜಾನ್ ನಲ್ಲಿ ಬುಕ್ ಮಾಡ್ಬಹುದು ರೈಲ್ವೆ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಅಮೆಜಾನ್ ನಲ್ಲಿ ಬುಕ್ ಮಾಡ್ಬಹುದು ರೈಲ್ವೆ ಟಿಕೆಟ್

ಅಮೆಜಾನ್ ಇಂಡಿಯಾ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ.

ಅಮೆಜಾನ್ ಇಂಡಿಯಾ ಮೂಲಕ ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಅಮೆಜಾನ್ ಮತ್ತು ಐಆರ್‌ಸಿಟಿಸಿ ಒಪ್ಪಂದ ಮಾಡಿಕೊಂಡಿದೆ.

ಮೊದಲ ಬಾರಿ 100 ರೂಪಾಯಿಗೂ ಹೆಚ್ಚಿನ ಮೌಲ್ಯದ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಅಮೆಜಾನ್ ಗ್ರಾಹಕರಿಗೆ ಶೇಕಡಾ 10ರಷ್ಟು ಕ್ಯಾಶ್‌ಬ್ಯಾಕ್ ನೀಡಲಿದೆ. ಪ್ರಧಾನ ಸದಸ್ಯರಿಗೆ ಶೇಕಡಾ 12 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಕ್ಯಾಶ್‌ಬ್ಯಾಕ್ ಕೊಡುಗೆ ಸೀಮಿತ ಅವಧಿಗೆ ಮಾನ್ಯವಾಗಿರುತ್ತದೆ.

ಅಮೆಜಾನ್‌ನ ರೈಲು ಟಿಕೆಟ್ ಬುಕಿಂಗ್ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಿದೆ. ಇದ್ರಲ್ಲಿ ಒಮ್ಮೆ 6 ಜನರಿಗೆ ಟಿಕೆಟ್ ಕಾಯ್ದಿರಿಸಬಹುದು. ತತ್ಕಾಲ್ ನಲ್ಲಿ ಒಮ್ಮೆ 4 ಜನರಿಗೆ ಟಿಕೆಟ್ ಕಾಯ್ದಿರಿಸಬಹುದು. ಪ್ರಯಾಣಕ್ಕೆ 120 ದಿನಗಳ ಮೊದಲು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು.

ಸುಮಾರು ಒಂದೂವರೆ ವರ್ಷದ ಹಿಂದೆ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ವಿಮಾನ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಪ್ರಾರಂಭಿಸಿದೆ. 2019 ರ ನವೆಂಬರ್‌ನಲ್ಲಿ ಬಸ್ ಟಿಕೆಟ್ ಬುಕಿಂಗ್ ವೈಶಿಷ್ಟ್ಯವನ್ನು ಶುರು ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...