ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ –ಟ್ರಾಯ್ ಮೇ 1 ರಿಂದ ಹೊಸ ನಿಯಮ ಜಾರಿಗೆ ತರಲಿದ್ದು, ನಕಲಿ ಕರೆ ಮತ್ತು ಎಸ್ಎಂಎಸ್ ಕಿರಿಕಿರಿಗೆ ಬ್ರೇಕ್ ಬೀಳಲಿದೆ.
ಹೊಸ ನಿಯಮಗಳ ಅಡಿಯಲ್ಲಿ ಮೇ 1 ರಿಂದ ಟೆಲಿಕಾಂ ಕಂಪನಿಗಳು ಟ್ರಾಯ್ ಸೂಚನೆಯನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಇದು ಫೋನಿಗೆ ಬರುವ ನಕಲಿ ಕರೆಗಳು ಮತ್ತು ಎಸ್ಎಂಎಸ್ ಗಳನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಜನರಿಗೆ ಅನಗತ್ಯ ಕರೆ ಮತ್ತು ಸಂದೇಶಗಳು ಬರುವುದು ತಪ್ಪಲಿದೆ. ಸ್ಪ್ಯಾಮ್ ಫಿಲ್ಟರ್ ಕಡ್ಡಾಯ ಅಳವಡಿಕೆ ನಿಯಮ ಜಾರಿಯಾಗಲಿದೆ.
ಬ್ಯಾಂಕ್, ವಿಮಾ ಕಂಪನಿಗಳ ಹೆಸರಿನಲ್ಲಿ ನಾನಾ ಸಂಖ್ಯೆಗಳಿಂದ ವಂಚಕರು ಮಾಡುವ ಕರೆಗಳು ಅಥವಾ ಕಳಿಸುವ ಸಂದೇಶಗಳನ್ನು ತಡೆಯುತ್ತವೆ. ಈಗಾಗಲೇ ಏರ್ಟೆಲ್ ಸ್ಪ್ಯಾಮ್ ಫಿಲ್ಟರ್ ಬಳಕೆ ಪ್ರಾರಂಭಿಸಿದ್ದು, ರಿಲಯನ್ಸ್ ಜಿಯೋ ಕೂಡ ಶೀಘ್ರವೇ ಪ್ರಾರಂಭಿಸುವ ಸಾಧ್ಯತೆ ಇದೆ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ತಂತ್ರಜ್ಞಾನ ಬಳಕೆಯ ಮೂಲಕ ಅನಪೇಕ್ಷಿತ ಟೆಕ್ಸ್ಟ್ ಮೆಸೇಜ್ ಅಥವಾ ಕರೆಗಳನ್ನು ನಿರ್ಬಂಧಿಸಬೇಕು ಎಂದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.