ನವದೆಹಲಿ: ‘ಆಧಾರ್’ ಬಳಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ರಾಷ್ಟ್ರೀಯ ಆರೋಗ್ಯ ID ಯನ್ನು ರಚಿಸಲಾಗಿದೆ.
ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ನಡಿ ಐಡಿ ಜನರೇಟ್ ಮಾಡಲಾಗುತ್ತದೆ.
ಲಸಿಕೆ ಪಡೆಯುವಾಗ ಆಧಾರ್ ಸಂಖ್ಯೆಯನ್ನು ನೀಡಿದವರ ಸರ್ಟಿಫಿಕೇಟ್ ನಲ್ಲಿ ಮಾತ್ರ ಡಿಜಿಟಲ್ ಐಡಿ ಜನರೇಟ್ ಆಗಲಿದೆ. ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಗೆ ಜನರ ಸಮ್ಮತಿ ಅಗತ್ಯವಾಗಿದೆ. ಆದರೆ, ಜನರ ಒಪ್ಪಿಗೆ ಇಲ್ಲದೆ ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡಲಾಗ್ತಿದೆ. ಲಸಿಕೆ ಪಡೆದವರಿಗೆ ಡಿಜಿಟಲ್ ಹೆಲ್ತ್ ಐಡಿ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದ್ದ ಯೋಜನೆ ಇದಾಗಿದೆ ಎನ್ನಲಾಗಿದೆ.