ಬೆಂಗಳೂರು: ಇಂದಿನಿಂದ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದ್ದು ಫಾಸ್ಟಾಗ್ ಇಲ್ಲದೆ ಬಂದ ವಾಹನ ಸವಾರರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ನವಯುಗ ಟೋಲ್ ನಲ್ಲಿ ಕಾರ್, ಜೀಪ್ ಗಳು 40 ರೂ.,ಎಸ್ಎಲ್ವಿ 70 ರೂ., ಬಸ್, ಟ್ರಕ್ ಗಳಿಗೆ 150 ರೂ., ಮಲ್ಟಿ ಆಕ್ಸೆಲ್ ವಾಹನಗಳಿಗೆ 250 ರೂ. ವಸೂಲಿ ಮಾಡಲಾಗಿದೆ. ಈ ಹಿಂದೆ ಇದರ ಅರ್ಧದಷ್ಟು ಹಣ ವಸೂಲಿ ಮಾಡಲಾಗುತ್ತಿತ್ತು.
ದುಪ್ಪಟ್ಟು ಶುಲ್ಕ ವಸೂಲಿ ವಿರುದ್ಧ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಬಳಿಯಿರುವ ಟೋಲ್ ಪ್ಲಾಜಾ ಬಳಿ ಗಲಾಟೆ ಆಗಿದೆ. ದುಪ್ಪಟ್ಟುಹಣ ನೀಡಲು ಟೋಲ್ ಸಿಬ್ಬಂದಿಯೊಂದಿಗೆ ವಾಹನ ಸವಾರರು ಜಗಳವಾಡಿದ್ದಾರೆ. ಟೋಲ್ ಸಿಬ್ಬಂದಿ ಸರ್ಕಾರದ ಆದೇಶ ಪತ್ರ ತೋರಿಸಿದ್ದಾರೆ. ಆದರೆ ಈ ಬಗ್ಗೆ ನಮಗೆ ಮಾಹಿತಿ ಇಲ್ಲವೆಂದು ವಾಹನ ಸವಾರರು ಹೇಳಿದ್ದಾರೆ.
ಫಾಸ್ಟಾಗ್ ಇಲ್ಲದೆ ಬಂದವರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಟೋಲ್ ಗಳಲ್ಲಿ ಗಲಾಟೆಯಾಗಿದೆ.