ಬೆಂಗಳೂರು: ಟೋಲ್, ಫ್ಲೈ ಓವರ್ ಸುಂಕ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಟೋಲ್, ಫ್ಲೈಓವರ್ ಸುಂಕವನ್ನು ಶೇಕಡ 25 ರಷ್ಟು ಏರಿಕೆ ಮಾಡಲಾಗಿದೆ.
ಟೋಲ್ ಸುಂಕ ಹೆಚ್ಚಳದ ವಿರುದ್ಧ ವಾಹನ ಸವಾರರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಟೋಲ್ ಮತ್ತು ಫ್ಲೈ ಓವರ್ ಶುಲ್ಕವನ್ನು ಹೆಚ್ಚಳ ಮಾಡಿದೆ. ದ್ವಿಚಕ್ರ ವಾಹನ ಸವಾರರಿಗೆ 5 ರೂ. ಹೆಚ್ಚಳ ಮಾಡಲಾಗಿದ್ದು, ನಿನ್ನೆಯವರೆಗೂ 20 ರೂ. ನೀಡಿ ಟೋಲ್ ಮತ್ತು ಫ್ಲೈ ಓವರ್ ಬಳಸಿಕೊಳ್ಳಲಾಗುತ್ತಿತ್ತು. ಇಂದಿನಿಂದ ಫ್ಲೈ ಓವರ್ ಬಳಸಲು 25 ರೂಪಾಯಿ ನೀಡಬೇಕಾಗಿದೆ. 35 ರೂಪಾಯಿ ನೀಡಿದರೆ 12 ಗಂಟೆಯವರೆಗೂ ಫ್ಲೈ ಓವರ್ ಬಳಸಿಕೊಳ್ಳಬಹುದಾಗಿದೆ.
ವಾಣಿಜ್ಯ ಸಂಬಂಧಿತ ವಾಹನಗಳಿಗೂ ಸುಂಕ ಹೆಚ್ಚಳ ಮಾಡಲಾಗಿದೆ. ಸಿಂಗಲ್ ಪಾಸ್ ಪಡೆದ ವಾಹನಗಳಿಗೆ ಪಾವತಿಸಬೇಕಾದ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಕಾರ್ ಸಿಂಗಲ್ ಪಾಸ್ 60 ರೂಪಾಯಿ ನೀಡಬೇಕು.
ವಾಣಿಜ್ಯ ಬಳಕೆಯ ವಾಹನ ಸಿಂಗಲ್ ಪಾಸ್ 85 ರೂ. ನೀಡಬೇಕಿದೆ
ಟ್ರಕ್, ಬಸ್ ಸಿಂಗಲ್ ಪಾಸ್ 170 ರೂ. ನೀಡಬೇಕಿದೆ.
ಭಾರಿ ವಾಹನಗಳಿಗೆ ಸಿಂಗಲ್ ಪಾಸ್ 335 ರೂ. ನೀಡಬೇಕಿದೆ.
ದ್ವಿಚಕ್ರ ವಾಹನ ಒಂದು ದಿನದ ಪಾಸ್ 35 ರೂಪಾಯಿ ನಿಗದಿ ಮಾಡಲಾಗಿದೆ.
ಕಾರ್ ಒಂದು ದಿನದ ಪಾಸ್ 90 ರೂಪಾಯಿ ನೀಡಬೇಕಿದೆ.
ವಾಣಿಜ್ಯ ಬಳಕೆಯ ವಾಹನ ಒಂದು ದಿನದ ಪಾಸ್ 125 ರೂ. ನಿಗದಿಪಡಿಸಲಾಗಿದೆ.
ಬಸ್, ಟ್ರಕ್ ಒಂದು ದಿನದ ಪಾಸ್ 250 ರೂಪಾಯಿ ನಿಗದಿಪಡಿಸಲಾಗಿದೆ.
ಭಾರಿ ವಾಹನಗಳಿಗೆ ಒಂದು ದಿನದ ಪಾಸ್ 505 ರೂಪಾಯಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ.