ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಶೇಕಡ 22ರಷ್ಟು ಟೋಲ್ ದರ ಹೆಚ್ಚಳ ಮಾಡಲಾಗಿದೆ.
ಜೂನ್ 1 ರಿಂದಲೇ ದುಬಾರಿ ಟೋಲ್ ಶುಲ್ಕ ಜಾರಿ ಮಾಡಿ ಸವಾರರ ಜೇಬಿಗೆ ಕತ್ತರಿ ಹಾಕಲಾಗಿದೆ.
ಫಾಸ್ಟ್ ಟ್ಯಾಗ್ ಹಿನ್ನೆಲೆಯಲ್ಲಿ ವಾಹನ ಸವಾರರ ಗಮನಕ್ಕೆ ಇದು ಬಂದಿರಲಿಲ್ಲ.
ಕಾರ್, ಜೀಪ್, ವ್ಯಾನ್ ಏಕಮುಖ ಸಂಚಾರ ದರ 30 ರೂ. ಹೆಚ್ಚಳ ಮಾಡಲಾಗಿದ್ದು 135 ರಿಂದ 165 ರೂಪಾಯಿಗೆ ಹೆಚ್ಚಳ ಆಗಿದೆ
ಲಘು ವಾಹನಗಳು, ಮಿನಿ ಬಸ್ ಗಳ ಏಕಮುಖ ಟೋಲ್ ಶುಲ್ಕ 50 ರೂಪಾಯಿ ಹೆಚ್ಚಳವಾಗಿದ್ದು, 220 ರೂ.ನಿಂದ 270 ರೂ.ಗೆ ಏರಿಕೆಯಾಗಿದೆ.
ಟ್ರಕ್, ಬಸ್, 2 ಆಕ್ಸೆಲ್ ವಾಹನ ಏಕಮುಖ ಟೋಲ್ ಶುಲ್ಕ 105 ರೂಪಾಯಿ ಹೆಚ್ಚಳವಾಗಿದ್ದು, 460 ರೂ. ನಿಂದ 565 ರೂ.ಗೆ ಹೆಚ್ಚಳವಾಗಿದೆ.
ಮೂರು ಆಕ್ಸೆಲ್ ವಾಹನಗಳ ಏಕಮುಖ ಸಂಚಾರದ ಟೋಲ್ ಶುಲ್ಕ 115 ರೂ. ಹೆಚ್ಚಳವಾಗಿದ್ದು, 500 -615 ರೂ.ಗೆ ಏರಿಕೆಯಾಗಿದೆ
ಭಾರಿವಾಹನ ಏಕಮುಖ ಸಂಚಾರದ ಟೋಲ್ ಶುಲ್ಕ 165 ರೂ. ಹೆಚ್ಚಳವಾಗಿದ್ದು, 720 ರೂನಿಂದ 885 ರೂಗೆ ಹೆಚ್ಚಳ ಆಗಿದೆ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಏಕಮುಖ ಸಂಚಾರದ ಟೋಲ್ ಶುಲ್ಕ 200 ರೂ. ಹೆಚ್ಚಳವಾಗಿದ್ದು, 880 ರೂ. ನಿಂದ 1080 ರೂ.ಗೆ ಹೆಚ್ಚಳ ಆಗಿದೆ
ಈ ಹಿಂದೆ ಏಪ್ರಿಲ್ 1ರಂದು ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ಸಾರ್ವಜನಿಕರಿಂದ ಆಕ್ರೋಶ ಹಿನ್ನೆಲೆಯಲ್ಲಿ ದರ ಹೆಚ್ಚಳ ಆದೇಶ ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಟೋಲ್ ದರ ಹೆಚ್ಚಳ ಮಾಡಿ ಹೆದ್ದಾರಿ ಪ್ರಾದಿಕಾರ ಸವಾರರ ಜೇಬಿಗೆ ಕತ್ತರಿ ಹಾಕಿದೆ.