ನವದೆಹಲಿ: ಅ. 1ರಿಂದ ಕಾರ್ ಗಳಿಗೆ ಕೇಂದ್ರ ಸರ್ಕಾರದಿಂದ ಕ್ರ್ಯಾಶ್ ಟೆಸ್ಟ್ ನಡೆಸಿ ಸ್ಟಾರ್ ರೇಟಿಂಗ್ ನೀಡಲಾಗುವುದು. ಇನ್ನು ಮುಂದೆ ಕೇಂದ್ರ ಸರ್ಕಾರವೇ ದೇಶದಲ್ಲಿ ಮಾರಾಟವಾಗುವ ಕಾರ್ ಗಳ ಕ್ಯಾಶ್ ಟೆಸ್ಟ್ ನಡೆಸಲಿದೆ.
ಅಕ್ಟೋಬರ್ 1ರಿಂದ ಕಾರ್ ಗಳ ಸುರಕ್ಷತಾ ಪರೀಕ್ಷೆ ನಡೆಸುವ ಸರ್ಕಾರವೇ ಸ್ಟಾರ್ ರೇಟಿಂಗ್ ನೀಡಲಿದೆ ಎಂದು ಹೇಳಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರದ ಮೂಲಕವೇ ಕಾರ್ ಗಳಿಗೆ ಸುರಕ್ಷತಾ ಪರೀಕ್ಷೆ ನಡೆಸಿ ಗುಣಮಟ್ಟಕ್ಕೆ ಅನುಗುಣವಾಗಿ ಸ್ಟಾರ್ ರೇಟಿಂಗ್ ನೀಡುವ ವ್ಯವಸ್ಥೆಯನ್ನು ಅಕ್ಟೋಬರ್ 1ರಿಂದ ಜಾರಿಗೆ ತರುವ ಸಾಧ್ಯತೆಯಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಕರಡು ನಿಯಮಾವಳಿಯನ್ನು ಪ್ರಕಟಿಸಿದೆ. ಆಮದು ಮಾಡಿಕೊಂಡ ಇಲ್ಲವೇ ದೇಶದಲ್ಲಿ ಉತ್ಪಾದನೆಯಾದ ಭಾರತದಲ್ಲಿ ಮಾರಾಟ ಮಾಡುವ ಎಂ1 ಕೆಟಗರಿಯ 3.5 ಟನ್ ಗಿಂತ ಕಡಿಮೆ ತೂಕದ ಕಾರ್ ಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎನ್ನಲಾಗಿದೆ.