ಭಾರತದಲ್ಲಿ ಪ್ರಸಿದ್ಧ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಷನ್ ಬ್ಯಾನ್ ಆಗಿದೆ. ಈ ಎಲ್ಲ ಅಪ್ಲಿಕೇಷನ್ ಈಗ ಅಂದ್ರೆ ಇಂದು ಅಥವಾ ನಾಳೆ ವಾಪಸ್ ಬರುತ್ತೆ ಎಂಬ ಸುದ್ದಿ ಹರಿದಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜುಲೈ 22ರಂದು ವಾಪಸ್ ಬರುತ್ತೆ ಟಿಕ್ ಟಾಕ್ ಎಂಬ ಸಂದೇಶ ಹರಿದಾಡ್ತಿದೆ. ಆದ್ರೆ ಇದು ಕೇವಲ ವದಂತಿ.
ವಾಸ್ತವವಾಗಿ ಭಾರತೀಯರ ಡೇಟಾವನ್ನು ಈ ಅಪ್ಲಿಕೇಷನ್ ಗಳು ಕದಿಯುತ್ತಿವೆ. ಇದನ್ನು ಬೇರೆ ದೇಶಕ್ಕೆ ನೀಡ್ತಿದೆ ಎಂಬ ಆರೋಪದ ಮೇಲೆ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಲಾಗಿತ್ತು. ಜುಲೈ 22ರವರೆಗೆ ಇದಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರ ಹೇಳಿತ್ತು.
ಭಾರತದಲ್ಲಿ ಬ್ಯಾನ್ ಆದ ಅಪ್ಲಿಕೇಷನ್ ಗಳು ಜುಲೈ 22ರವರೆಗೆ ಸರ್ಕಾರ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಉತ್ತರ ಸರ್ಕಾರಕ್ಕೆ ತೃಪ್ತಿ ತಂದಲ್ಲಿ ಅಪ್ಲಿಕೇಷನ್ ವಾಪಸ್ಸಾತಿ ಬಗ್ಗೆ ಆಲೋಚನೆ ಮಾಡಲಿದೆ. ಸದ್ಯ ಅಪ್ಲಿಕೇಷನ್ ತಾತ್ಕಾಲಿಕವಾಗಿ ಬ್ಯಾನ್ ಆಗಿದೆ. ಹಾಗಂತ ಇಂದು ಅಥವಾ ನಾಳೆಯೇ ಎಲ್ಲ ಅಪ್ಲಿಕೇಷನ್ ವಾಪಸ್ ಬರುತ್ತೆ ಎಂದಲ್ಲ.