ವಿದೇಶದಲ್ಲಿರುವ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ಕಳುಹಿಸಲು ಇನ್ಮುಂದೆ ಚಿಂತೆಪಡಬೇಕಾಗಿಲ್ಲ. ಮೊಬೈಲ್ ಮೂಲಕವೇ ಅವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಈ ಸೌಲಭ್ಯ ನೀಡ್ತಿದೆ. ಬ್ಯಾಂಕ್ ವಿದೇಶಿ ವಿನಿಮಯ ಸೇವೆ ಕೋಟಕ್ ರೆಮಿಟ್ ಸೇವೆ ಶುರು ಮಾಡಿದೆ.
ಕೋಟಕ್ ರೆಮಿಟ್ ಸೇವೆ ಈಗಾಗಲೇ ಶುರುವಾಗಿದೆ. ಗ್ರಾಹಕರು ಮೊಬೈಲ್ ಮೂಲಕ ವಿದೇಶದಲ್ಲಿರುವ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ಕಳುಹಿಸಬಹುದು. 25000 ಅಮೆರಿಕನ್ ಡಾಲರ್ ವರೆಗೆ ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ. ಕೊಟಕ್ ರೆಮಿಟ್ ಯುಎಸ್ ಡಾಲರ್, ಆಸ್ಟ್ರೇಲಿಯನ್ ಡಾಲರ್, ಯುಕೆ ಪೌಂಡ್ ಸ್ಟರ್ಲಿಂಗ್, ಹಾಂಗ್ ಕಾಂಗ್ ಡಾಲರ್, ಸೌದಿ ರಿಯಾಲ್, ಕೆನಡಿಯನ್ ಡಾಲರ್, ಸಿಂಗಾಪುರ್ ಡಾಲರ್, ಯುರೋ, ಜಪಾನೀಸ್ ಯೆನ್ ಸೇರಿದಂತೆ 15 ಕರೆನ್ಸಿಗಳಲ್ಲಿ ಹಣ ರವಾನೆ ಮಾಡಲು ಅವಕಾಶ ನೀಡ್ತಿದೆ.
ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ, ಸಾರ್ವಜನಿಕರೊಂದಿಗೆ ಸಂವಹನಕ್ಕೆ ಕೂ ಆಪ್ ಗೆ ಮೊದಲ ಆದ್ಯತೆ
ಮೊಬೈಲ್ ನಲ್ಲಿ ಕೋಟಕ್ ರೆಮಿಟ್ ಶುರು ಮಾಡುವ ಮೂಲಕ ಬ್ಯಾಂಕ್ ಡಿಜಿಟಲ್ ರೂಪಾಂತರದ ಹೊಸ ಹಂತವನ್ನು ಪ್ರವೇಶ ಮಾಡಿದೆ. ಇದ್ರಿಂದ ಗ್ರಾಹಕರ ಕೆಲಸ ಸುಲಭವಾಗಲಿದೆ. ಗ್ರಾಹಕರ ವಿವರ ಹಾಗೂ ಹಣ ವರ್ಗಾವಣೆಯಾಗ್ತಿರುವ ಖಾತೆದಾರರ ವಿವರ ಭರ್ತಿ ಮಾಡಿ ದಿನಕ್ಕೆ 18 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು. ವರ್ಷಕ್ಕೆ 250,000 ಯುಎಸ್ ಡಾಲರ್ ವರೆಗೆ ವರ್ಗಾವಣೆ ಮಾಡಬಹುದು.