ಅಮೆರಿಕ ಮೂಲದ ಕಂಪನಿಯೊಂದು ಹೊಟ್ಟೆ ಬಿರಿಯುವಂತೆ ಪಿಜ್ಜಾ ತಿಂದುಂಡು, ನೆಟ್‌ಫ್ಲಿಕ್ಸ್ ನೋಡಿಕೊಂಡು ಇರಲು ಬರುವವರಿಗೆ $500 ಗಳನ್ನು ನೀಡಲು ಮುಂದಾಗಿದೆ.
ಹೀಗೆ ತಿಂದುಕೊಂಡು ಶೋಗಳನ್ನು ವೀಕ್ಷಿಸುವ ಮಂದಿಯ ಹುಡುಕಾಟದಲ್ಲಿ ಬೋನಸ್‌ಫೈಂಡರ್ ಹೆಸರಿನ ಅಮೆರಿಕದ ಈ ಜಾಲತಾಣ ಇದೆ. “2021ನ್ನು ಭರ್ಜರಿಯಾಗಿ ಆರಂಭಿಸಿದ ಕೂಡಲೇ ಲಾಕ್‌ಡೌನ್ ಮತ್ತೆ ಬರುತ್ತಿರುವ ಕಾರಣ, ಜನರಲ್ಲಿ ಚಿಯರ್ ಮೂಡ್ ಹಬ್ಬಿಸಲು ನೆಟ್‌ಫ್ಲಿಕ್ಸ್ ನೋಡಿಕೊಂಡು ಪಿಜ್ಜಾ ತಿಂದುಕೊಂಡು ಇರುವ ಮಂದಿಗೆ ದುಡ್ಡು ಕೊಡಲು ಬೋನಸ್‌ಫೈಂಡರ್ ಇಚ್ಛಿಸುತ್ತದೆ” ಎಂದು ತನನ್ ಜಾಲತಾಣದಲ್ಲಿ ಹೇಳಿಕೊಂಡಿದೆ.
ಫೆಬ್ರುವರಿ 9ರಂದು ರಾಷ್ಟ್ರೀಯ ಪಿಜ್ಜಾ ದಿವಸ ಇರುವ ಕಾರಣ, ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ನೆಟ್‌ಫ್ಲಿಕ್ಸ್ ಶೋ ನೋಡಿಕೊಂಡು ಪಿಜ್ಜಾ ತಿಂದುಕೊಡು ಇರಲು ತಲಾ $500 (ಸರಿಸುಮಾರು 36,575 ರೂ.ಗಳು) ಪಾವತಿ ಮಾಡಲಾಗುತ್ತದೆ.
ತಾವು ನೋಡುವ ಸೀರೀಸ್‌ನಲ್ಲಿ ನಟನೆಯ ಗುಣಮಟ್ಟ, ಸೀರೀಸ್ ಎಂಡಿಂಗ್, ಕಥೆ ಹಾಗೂ ಪ್ಲಾಟ್‌ಗಳ ಬಗ್ಗೆ ರಿವ್ಯೂ ಮಾಡುವುದರ ಜೊತೆಗೆ ಪಿಜ್ಜಾಗಳ ಬಣ್ಣ, ಪ್ರೆಸೆಂಟೇಷನ್, ತಯಾರಿಸಲು ಬಳಸಿದ ವಸ್ತುಗಳ ಗುಣಮಟ್ಟಗಳನ್ನು ಪರಿಶೀಲಿಸಿ ಕೊಟ್ಟ ದುಡ್ಡಿಗೆ ಅವುಗಳು ಬೆಲೆ ಬಾಳುತ್ತವೆಯೇ ಎಂದು ಅಂದಾಜಿಸಬೇಕಾಗುತ್ತದೆ.