ಮಾವಿನಹಣ್ಣಿಗೆ ಪ್ರಖ್ಯಾತವಾಗಿರುವ ರಾಜಸ್ಥಾನದ ಬಾನಸ್ವಾಡಾ ಪಟ್ಟಣದಲ್ಲಿ ಮಾವಿನಹಣ್ಣನ್ನು ಆನ್ಲೈನ್ ಮೂಲಕ ಮನೆಬಾಗಿಲಿಗೆ ಡೆಲಿವರಿ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಹಣ್ಣಿನ ಸೀಸನ್ನಲ್ಲಿ ಜನರ ಬಾಯಿ ರುಚಿ ತಣಿಸಲು ಲಾಕ್ಡೌನ್ ನಿರ್ಬಂಧಗಳೊಂದಿಗೆ ರಾಜಿ ಮಾಡಿಕೊಳ್ಳದೇ ಜನರ ಮನೆಬಾಗಿಲಿಗೆ ಮಾವಿನಹಣ್ಣುಗಳನ್ನು ತಲುಪಿಸುವ ಈ ವ್ಯವಸ್ಥೆಗೆ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಸಿಂಗ್ ವಿಶೇಷ ತಂಡವೊಂದನ್ನು ನೇಮಕ ಮಾಡಿದ್ದಾರೆ. ಗ್ರಾಹಕರು ಇದಕ್ಕೆಂದೇ ವಿಶೇಷವಾಗಿ ವ್ಯವಸ್ಥೆ ಮಾಡಲಾದ ಡಿಜಿಟಲ್ ಶೋರೂಂಗೆ ಹಣ್ಣುಗಳನ್ನು ಆರ್ಡರ್ ಮಾಡಲಿದ್ದಾರೆ.
ಗುಡ್ ನ್ಯೂಸ್: ಮಕ್ಕಳ ಶಾಲಾ ಶುಲ್ಕದಲ್ಲಿ ಶೇಕಡ 25 ರಷ್ಟು ವಿನಾಯಿತಿ
ಈ ಮೂಲಕ ಹಣ್ಣುಗಳ ಅಂಗಡಿಗಳ ಮುಂದೆ ಜನಜಂಗುಳಿ ತಪ್ಪಿಸುವುದಲ್ಲದೇ ಲಾಕ್ಡೌನ್ ನಿರ್ಬಂಧವನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಅನುವು ಮಾಡಿಕೊಂಡಂತೆ ಆಗುತ್ತದೆ ಎನ್ನುತ್ತಾರೆ ಸಿಂಗ್. ಇವೆಲ್ಲಕ್ಕಿಂತ ಮುಖ್ಯವಾಗಿ ರೈತರ ಫಸಲಿಗೆ ಲಾಕ್ಡೌನ್ನಿಂದ ಯಾವುದೇ ಹಾನಿಯಾಗದಂತೆ ತಡೆಗಟ್ಟಿರುವುದು ಶ್ಲಾಘನೀಯವಾಗಿದೆ.
ಸಂಕಟ ಬಂದಾಗ ದೇವರ ಮೊರೆ ತಪ್ಪಲ್ಲ; ಆದರೆ ಈ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಜನರಿಂದ ಹೋಮ ಮಾಡಿಸುವುದು ಸರಿಯಲ್ಲ; ಶಾಸಕರ ವಿರುದ್ಧ ಡಿಸಿಎಂ ಕಿಡಿ
ಜಿಲ್ಲಾ ಪ್ರವಾಸೋದ್ಯಮ ಮೇಲ್ದರ್ಜೆ ಸಮಿತಿ ಹಾಗೂ ಸಹಕಾರ ಗ್ರಾಹಕ ಅಂಗಡಿಗಳ ಮಂದಿಯನ್ನು ಒಗ್ಗೂಡಿಸಿ ಇದಕ್ಕೆಂದು ಸಮಿತಿ ರಚಿಸಿದ್ದ ಸಿಂಗ್, ಮಾವಿನ ಹಣ್ಣುಗಳ ಆನ್ಲೈನ್ ಆರ್ಡರಿಂಗ್ ಹಾಗೂ ಹೋ ಡೆಲಿವರಿಗೆ ವ್ಯವಸ್ಥೆ ಮಾಡಿದ್ದಾರೆ. ಕನಿಷ್ಠ ಐದು ಕಿಲೋನಿಂದ ಆರಂಭಿಸಿ ಮಾವಿನ ಹಣ್ಣುಗಳನ್ನು ಆರ್ಡರ್ ಮಾಡಬಹುದಾಗಿದೆ.