ಸಾಮಾನ್ಯವಾಗಿ ಮನೆಯನ್ನ ಖರೀದಿ ಮಾಡಬೇಕು ಅಂದರೆ ಲಕ್ಷಗಟ್ಟಲೇ ಹಣವನ್ನ ವ್ಯಯಿಸಬೇಕಾಗುತ್ತೆ. ಆದರೆ ಇಟಲಿಯ ಈ ಪಟ್ಟಣದಲ್ಲಿ ಮಾತ್ರ ಮನೆಯನ್ನ ಒಂದು ಕಪ್ ಕಾಫಿಯ ದರಕ್ಕಿಂತಲೂ ಕಡಿಮೆ ಖರ್ಚಿಗೆ ಮಾರಾಟ ಮಾಡಲಾಗ್ತಿದೆ.
ಸಿಸಿಲಿಯ ನೈಋತ್ಯ ದಿಕ್ಕಿನಲ್ಲಿರುವ ಈ ಪಟ್ಟಣದಲ್ಲಿ ಒಂದು ಮನೆಯನ್ನ ಕೇವಲ 83 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಈ ಪಟ್ಟಣದಲ್ಲಿ ಮೊದಲೇ ಜನಸಂಖ್ಯೆ ತುಂಬಾನೇ ಕಡಿಮೆ ಇತ್ತು. ಇದೀಗ ಕರೊನಾ ಬಂದ ಮೇಲಂತೂ ಜನಸಾಂದ್ರತೆ ತೀರಾ ಕಡಿಮೆ ಮಟ್ಟಕ್ಕೆ ಕುಸಿದಿದೆ. ಇಲ್ಲಿರುವ ಮನೆಗಳು 1600 ದಶಕದ ಇತಿಹಾಸ ಹೊಂದಿದ್ದು ಆಸ್ತಿ ಮಾರಾಟ ಮಾಡೋಕೆ ಜನರು ಹೆಣಗಾಡುತ್ತಿದ್ದಾರೆ,
ಸಲೇಮಿ ಸಿಸಿಲಿ ದ್ವೀಪ ಐತಿಹಾಸಿಕ ಸ್ಥಳದ ಜೊತೆಗೆ ದ್ರಾಕ್ಷಿ ಹಾಗೂ ಆಲಿವ್ ತೋಟಗಳಿಂದ ಆವೃತವಾಗಿದೆ. ಇಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಿಂದ ಜೀವನ ನಿರ್ವಹಣೆ ಮಾಡಲಾಗದೇ ಇತ್ತ ಆಸ್ತಿ ಮಾರಾಟ ಮಾಡಲೂ ಆಗದೇ ಜನತೆ ಕಷ್ಟದಲ್ಲಿದ್ದಾರೆ,