
ಮಾಲ್ ಗಳೆಂದರೆ ಹೊಚ್ಚ ಹೊಸ ಸಾಮಗ್ರಿಗಳು ಸಿಗುತ್ತವೆ ಎನ್ನುವ ಕಲ್ಪನೆ ಇರುತ್ತದೆ. ಆದರೆ ಈಗ ನಾವು ಹೇಳಲು ಹೊರಟಿರುವ ಮಾಲ್‌ಗೆ ನೀವು ಒಮ್ಮೆ ಹೊಕ್ಕರೆ ನಿಮಗೆ ಸಿಗುವುದು ಮಾತ್ರ ಬರೀ ಸೆಕೆಂಡ್ ಅಥವಾ ಥರ್ಡ್ ಹ್ಯಾಂಡಲ್ ವಸ್ತುಗಳು.
ಹೌದು, ಅಚ್ಚರಿಯಾದರೂ ಇದು ಸತ್ಯ. ಸ್ವೀಡನ್‌ನ ಎಸ್ಕಿಲ್ಸುನಾ ಎನ್ನುವ ಪ್ರದೇಶದಲ್ಲಿ ಈ ಹೊಸ ಮಾಲ್ ಅನ್ನು ಆರಂಭಿಸಲಾಗಿದೆ. ಸುಮಾರು ಐದು ಸಾವಿರ ಚದರ ಮೀಟರ್ ಇರುವ ಈ ಮಾಲ್‌ನಲ್ಲಿ 60ರಿಂದ 65 ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಂಪ್ರದಾಯಿಕವಾಗಿ ಈ ಊರು ಕೈಗಾರಿಕಾ ನಗರವಾಗಿದ್ದು, 2015ರಲ್ಲಿ ಇದನ್ನು ಆರಂಭಿಸಲಾಗಿದೆ. ಮರುಬಳಕೆ, ರಿಸೈಕಲ್ ವಸ್ತುಗಳನ್ನು ಬಳಸಬಹುದು ಎನ್ನುವುದನ್ನು ತೋರಿಸುವುದಕ್ಕಾಗಿ ಈ ಮಾಲ್ ಆರಂಭಿಸಲಾಗಿದೆ ಎಂದು ಮಾಲೀಕ ಅನಾ ಬರ್ಗೆಸ್ರೋಮ್ ಹೇಳಿದ್ದಾರೆ. ಎರಡು ಫ್ಲೋರ್‌ನಲ್ಲಿ ಗೆಜೆಟ್ಸ್, ಪೀಠೋಪಕರಣ, ಬಟ್ಟೆ ಹಾಗೂ ಮಕ್ಕಳ ಆಟದ ಸಾಮಾನುಗಳಿವೆ ಎಂದು ಹೇಳಲಾಗಿದೆ.