alex Certify ಗ್ರಾಹಕರನ್ನ ಸೆಳೆಯಲು ಈ ಸೂಪರ್​ ಮಾರ್ಕೆಟ್​ ಮಾಡಿದೆ ಭರ್ಜರಿ ಐಡಿಯಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರನ್ನ ಸೆಳೆಯಲು ಈ ಸೂಪರ್​ ಮಾರ್ಕೆಟ್​ ಮಾಡಿದೆ ಭರ್ಜರಿ ಐಡಿಯಾ….!

ಸೂಪರ್​ ಮಾರ್ಕೆಟ್​​​ಗಳಿಗೆ ಹೋದ್ವಿ ಅಂದರೆ ಸಾಕು ಕುರುಕಲು ತಿಂಡಿಗಳಿರುವ ವಿಭಾಗ ನಮ್ಮನ್ನ ಸೆಳೆಯದೇ ಇರದು.
ವಿವಿಧ ಬಗೆಯ ವಿವಿಧ ಬಣ್ಣದ ಪ್ಯಾಕೆಟ್​​ಗಳಲ್ಲಿ ಇಟ್ಟಿರುವ ಕುರುಕಲು ತಿಂಡಿಗಳು ಗ್ರಾಹಕರನ್ನ ತಮ್ಮತ್ತ ಆಕರ್ಷಿಸುವಲ್ಲಿ ವಿಫಲವಾಗುವ ಉದಾಹರಣೆಗಳು ಬಹಳ ಕಡಿಮೆ. ಆದರೆ ಎಷ್ಟೋ ಮಂದಿ ಮನಸಿದ್ದರೂ ಅಲ್ಲಿಂದ ತಮ್ಮ ಕಣ್ತಪ್ಪಿಸಿ ಬೇರೆ ಕಡೆ ಹೋಗುತ್ತಾರೆ.

ಆದರೆ ನ್ಯೂಯಾರ್ಕ್​ನ ಮಳಿಗೆಯೊಂದರಲ್ಲಿ ಕುರುಕಲು ತಿಂಡಿಗಳನ್ನ ರೊಬೋಟ್​ ಒಂದು ಹಿಡಿದುಕೊಂಡಿದ್ದು ಗ್ರಾಹಕರ ಹತ್ತಿರತ್ತಿರಕ್ಕೆ ಬಂದು ಅವರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗ್ತಿವೆ. ಬಿಲ್ಲಿಂಗ್​ ಕೌಂಟರ್​​ನಲ್ಲಿ ಗ್ರಾಹಕರು ಬರುತ್ತಿದ್ದಂತೆಯೇ ಅದು ಗ್ರಾಹಕರ ಸುತ್ತಲೂ ತಿರುಗಾಡುತ್ತೆ.

ಈ ರೊಬೋಟ್​​ಗಳಿಗೆ ಮುಖ ಇರೋದಿಲ್ಲ. ಇದು ಮನುಷ್ಯ ಆಕೃತಿಯಲ್ಲಿರುವ ರೊಬೋಟ್​ ಅಲ್ಲ. ಬದಲಾಗಿ ಶೆಲ್ಫ್​ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ರೊಬೋಟ್​ನಲ್ಲಿರುವ ಸೆನ್ಸಾರ್​​ನಿಂದಾಗಿ ಅಂಗಡಿಯಲ್ಲಿ ಸುರಕ್ಷಿತವಾಗಿ ಇದು ಸಂಚರಿಸುತ್ತೆ ಹಾಗೂ ಗ್ರಾಹಕ ಕುರುಕಲು ತಿಂಡಿಗಾಗಿ ಆಸೆ ಪಡ್ತಿದ್ದರೆ ಅದನ್ನ ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತದೆಯಂತೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...