ಸುರೋಜಿತ್ ಚಟರ್ಜಿ 2020ರ ಫೆಬ್ರವರಿಯಲ್ಲಿ ಅಮೆರಿಕದ ಕ್ರಿಪ್ಟೋ ಎಕ್ಸ್ಚೇಂಜ್ ಕಾಯಿನ್ ಬೇಸ್ನಲ್ಲಿ ಮುಖ್ಯ ಉತ್ಪನ್ನ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ರು. ಸೇವೆಗೆ ನಿಯೋಜನೆಗೊಂಡು ಕೇವಲ 15 ತಿಂಗಳಲ್ಲಿ 1500 ಕೋಟಿ ರೂಪಾಯಿ ಸಂಪತ್ತನ್ನ ಕ್ರೋಢೀಕರಿಸಿದ್ದಾರೆ.
ಬ್ಲೂಮ್ಬರ್ಗ್ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಅವರು ಪ್ರಸ್ತುತ 3500 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಸ್ವೀಕರಿಸಲು ಸಿದ್ಧರಾಗ್ತಾರೆ ಎಂದು ಹೇಳಿದೆ.
ಉದ್ಯೋಗಿಗಳಿಗೆ ಖುಷಿ ಸುದ್ದಿ: 2021ರಲ್ಲಿ ಹೆಚ್ಚಾಗಲಿದೆ ಸಂಬಳ
ಚಟರ್ಜಿ ಐಐಟಿ ಖರ್ಗಾಪುರದಲ್ಲಿ ಬಿಎಸ್ಪಿ ಪದವಿಯನ್ನ ಪೂರೈಸಿದ್ದಾರೆ. ಕಾಯಿನ್ಬೇಸ್ ಸ್ಥಾಪಕರಾದ ಬ್ರೇನ್ ಆರ್ಮ್ಸ್ಟ್ರಾಂಗ್ ಹಾಗೂ ಫ್ರೆಡ್ ಎಹ್ರಸಮ್ ಜೊತೆ ಸೇರಿ 16 ಬಿಲಿಯನ್ ಡಾಲರ್ ಕ್ರೊಢೀಕರಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಹೇಳಿದೆ.
ಫೆಬ್ರವರಿ ತಿಂಗಳಲ್ಲಿ ಕಾಯಿನ್ಬೇಸ್ಗೆ ಸೇರಿಕೊಂಡ ಬಳಿಕ ಎರಡನೇ ಬಾರಿ ದೈತ್ಯ ಶಾಪಿಂಗ್ ಇ ಮಾರುಕಟ್ಟೆಯನ್ನ ಮುನ್ನಡೆಸಿದ್ದಾರೆ. ಈ ಹಿಂದೆ ಅವರು ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ನಲ್ಲಿ ಮೊಬೈಲ್ ನೆಟ್ವರ್ಕ್ ಜಾಹಿರಾತು ಹಾಗೂ ಉತ್ಪನ್ನ ವಿತರಣೆಯ ಮುಖ್ಯಸ್ಥರಾಗಿದ್ದರು.