ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ಹೆಚ್ಚಿಸುವ ಸಲುವಾಗಿ ಕಂಪನಿಯ ಸಿಇಒ ಒಬ್ಬರು ತಮ್ಮ ವೇತನವನ್ನೇ ಬಿಟ್ಟುಕೊಟ್ಟಿದ್ದಾರೆ. ಯಾರಿಗಾದರೂ ಇಂತಹ ಸಿಇಒ ಸಿಗಲು ಸಾಧ್ಯವೇ ?
ಅಮೆರಿಕಾದ ಸೆಟ್ಲ್ ನಗರದಲ್ಲಿ ಕ್ರೆಡಿಟ್ ಕಾರ್ಡ್ ಸೇವೆ ನೀಡುತ್ತಿರುವ ಗ್ರ್ಯಾವಿಟಿ ಪೇಮೆಂಟ್ಸ್ ಸಂಸ್ಥೆಯ ಸಿಇಒ ಡ್ಯಾನ್ ಪ್ರೈಸ್ ಅವರು ತಮ್ಮ ವೇತನದ ಶೇ.90 ರಷ್ಟನ್ನು ಸಿಬ್ಬಂದಿಗೆ ಬಿಟ್ಟುಕೊಟ್ಟಿದ್ದಾರೆ.
2015 ರಲ್ಲಿ ಬರೋಬ್ಬರಿ 1 ದಶಲಕ್ಷ ಡಾಲರ್ ವೇತನ ಪಡೆಯುತ್ತಿದ್ದ ಪ್ರೈಸ್, ಸಿಬ್ಬಂದಿಗೆ ಕನಿಷ್ಠ ವೇತನ ನೀಡಲು 70 ಸಾವಿರ ಡಾಲರ್ ವ್ಯಯಿಸಿದ್ದಾರೆ. ಇದರಿಂದ ಸಂಸ್ಥೆಯೂ ಅನಿರೀಕ್ಷಿತ ಏಳಿಗೆ ಕಾಣುತ್ತಿದ್ದು, ನಡೆಸುತ್ತಿದ್ದ ವ್ಯವಹಾರ ತ್ರಿಗುಣಗೊಂಡಿದೆ. ಸಿಬ್ಬಂದಿಯೂ ಉತ್ಸಾಹಿತರಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸಂಸ್ಥೆಗೆ ಲಾಭವೇ ಆಗಿದೆ.
ಒಂದು ಸಂಸ್ಥೆ ಇಷ್ಟು ವೇಗವಾಗಿ ಅಭಿವೃದ್ಧಿ ಹೊಂದಿದ್ದು ಹೇಗೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಕೂಡ ಅಧ್ಯಯನ ಮಾಡಿದ್ದು, ಇದೊಂದು ಅಧ್ಯಯನ ಹಾಗೂ ಅಳವಡಿಸಿಕೊಳ್ಳಲು ಯೋಗ್ಯ ವಿಷಯ ಎಂದಿದೆ.