
2022 ರ ಬಜೆಟ್ ಅಧಿವೇಶನದ ಮೊದಲ ದಿನ 2021-22 ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಬಜೆಟ್ 2022-23 ಕ್ಕಿಂತ ಮೊದಲು, ಈ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯ ವಿವರ ಒದಗಿಸುತ್ತದೆ. ಬೆಳವಣಿಗೆಯನ್ನು ವೇಗಗೊಳಿಸಲು ಯಾವ ಸುಧಾರಣೆ ಮಾಡಬೇಕೆಂಬುದನ್ನು ಇದು ವಿವರಿಸುತ್ತದೆ.
2021-22 ರ ಆರ್ಥಿಕ ಸಮೀಕ್ಷೆಯಲ್ಲಿ ಉಪಗ್ರಹ ಮತ್ತು ಜಿಯೋಸ್ಪೇಷಿಯಲ್ ಡೇಟಾದ ಬಳಕೆಯ ಬಗ್ಗೆ ಪ್ರಸ್ತಾಪಿಸಿದೆ. 2012 ಮತ್ತು 2021 ರಲ್ಲಿ ಭಾರತವು ರಾತ್ರಿಯಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡಿದೆ.
‘ರಾತ್ರಿಯ ಹೊಳಪು’ ತೋರಿಸುವ ಉಪಗ್ರಹ ಚಿತ್ರಗಳು ವಿದ್ಯುತ್ ಬಳಕೆ ಮತ್ತು ಪೂರೈಕೆಯನ್ನು ದೇಶಾದ್ಯಂತ ಹರಡಿದೆ ಎಂದು ತೋರಿಸುತ್ತದೆ” ಎಂದು ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಸನ್ಯಾಲ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಆರ್ಥಿಕ ಸಮೀಕ್ಷೆ 2022: 2012 ಮತ್ತು 2021 ರ ನಡುವಿನ ರಾತ್ರಿಯ ಪ್ರಕಾಶಮಾನತೆಯ ಉಪಗ್ರಹ ಫೋಟೋಗಳು ವಿದ್ಯುತ್ ಪೂರೈಕೆ, ಆರ್ಥಿಕ ಚಟುವಟಿಕೆ ಮತ್ತು ನಗರ ಬೆಳವಣಿಗೆಯ ವಿಸ್ತರಣೆಯನ್ನು ತೋರಿಸುತ್ತದೆ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ, ಫೆಬ್ರವರಿ 1 ಸೋಮವಾರದಂದು ಬಜೆಟ್ ಮಂಡಿಸಿದ್ದರಿಂದ ಜನವರಿ 29 ರಂದು ಬಜೆಟ್ ಗೆ ಎರಡು ದಿನಗಳ ಮೊದಲು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಯಿತು.
ಏನಿದು ಆರ್ಥಿಕ ಸಮೀಕ್ಷೆ?
ದೀರ್ಘಾವಧಿಯ ಬಜೆಟ್ ಸಂಪ್ರದಾಯ, ಆರ್ಥಿಕ ಸಮೀಕ್ಷೆಯನ್ನು 1950-51 ರಿಂದ ಪ್ರಸ್ತುತಪಡಿಸಲಾಗಿದೆ. 1964 ರವರೆಗೆ, ಇದನ್ನು ಬಜೆಟ್ ಜೊತೆಗೆ ಮಂಡಿಸಲಾಯಿತು. ಅಂದಿನಿಂದ, ಬಜೆಟ್ ಗೆ ಒಂದು ದಿನ ಮುಂಚಿತವಾಗಿ ಎಫ್‌ಎಂ ಸಮೀಕ್ಷೆಯನ್ನು ಪ್ರಸ್ತುತಪಡಿಸುವ ಸಂಪ್ರದಾಯವಾಗಿದೆ.
ಪ್ರಮುಖ ಬಜೆಟ್ ಡಾಕ್ಯುಮೆಂಟ್ ಆರ್ಥಿಕತೆಯ ಮಾರ್ಗಸೂಚಿಯ ಬಗ್ಗೆ ತಿಳಿಸುತ್ತದೆ, ನಿಜವಾದ ಬಜೆಟ್ ಮಂಡನೆಗಾಗಿ ಆರ್ಥಿಕ ಸ್ಥಿತಿ ತಿಳಿಸುತ್ತದೆ. ಆರ್ಥಿಕ ಸಮೀಕ್ಷೆಯು ಹಿಂದಿನ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯ ಕಾರ್ಯಕ್ಷಮತೆಯ ವಿಮರ್ಶೆಯನ್ನು ನೀಡುತ್ತದೆ, ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸರ್ಕಾರದ ನೀತಿಗಳ ಸ್ಥಿತಿಯನ್ನು ಹಂಚಿಕೊಳ್ಳುತ್ತದೆ.
ಈ ಸಮೀಕ್ಷೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ(DEA) ಅರ್ಥಶಾಸ್ತ್ರ ವಿಭಾಗ ಅಭಿವೃದ್ಧಿಪಡಿಸಿದೆ, ಇದನ್ನು ಮುಖ್ಯ ಆರ್ಥಿಕ ಸಲಹೆಗಾರರು(CEA) ನಿರ್ವಹಿಸುತ್ತಾರೆ.