ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಯೋಜನೆಗಳಿವೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದ್ರಿಂದ ಯಾವುದೇ ನಷ್ಟವಿಲ್ಲ. ಸರ್ಕಾರದ ಭದ್ರತೆಯಿರುತ್ತದೆ. ಅಂಚೆ ಕಚೇರಿ ಕೆಲ ಯೋಜನೆಗಳಲ್ಲಿ ಹಣ ಡಬಲ್ ಆಗುತ್ತದೆ. ನೀವೂ ಹೂಡಿಕೆ ಮಾಡುವ ಆಲೋಚನೆಯಲ್ಲಿದ್ದರೆ ಅಂಚೆ ಕಚೇರಿಯ ಈ ಕೆಳಗಿನ ಯೋಜನೆಗಳಲ್ಲಿ ಹೂಡಿಕೆ ಮಾಡಿ.
ಅಂಚೆ ಕಚೇರಿಯ ಟೈಂ ಡಿಪಾಜಿಟ್ (ಟಿಡಿ) ಯೋಜನೆಯಲ್ಲಿ ಶೇಕಡಾ 5.5 ಬಡ್ಡಿ ಸಿಗ್ತಿದೆ. ಒಂದು ವರ್ಷದಿಂದ ಮೂರು ವರ್ಷದವರೆಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಐದು ವರ್ಷದ ಠೇವಣಿಗೆ ಶೇಕಡಾ 6.7ರಷ್ಟು ಬಡ್ಡಿ ಸಿಗುತ್ತದೆ.
ಅಂಚೆ ಕಚೇರಿಯ ಸೇವಿಂಗ್ ಬ್ಯಾಂಕ್ ಖಾತೆಯಲ್ಲಿ ಹಣ ಡಬಲ್ ಆಗಲು ಹೆಚ್ಚಿನ ಸಮಯ ಕಾಯಬೇಕು. ಈ ಯೋಜನೆಯಲ್ಲಿ ಶೇಕಡಾ 4ರಷ್ಟು ಬಡ್ಡಿ ಸಿಗ್ತಿದೆ. ಅಂದ್ರೆ ಈ ಯೋಜನೆಯಲ್ಲಿ 18 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.
ಅಂಚೆ ಕಚೇರಿ ಆರ್ ಡಿಯಲ್ಲಿ ಶೇಕಡಾ 5.8ರಷ್ಟು ಬಡ್ಡಿ ಸಿಗ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 12.41 ವರ್ಷಕ್ಕೆ ಹಣ ದ್ವಿಗುಣಗೊಳ್ಳುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 6.6ರಷ್ಟು ಬಡ್ಡಿ ಸಿಗ್ತಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ರೆ 10.91 ವರ್ಷಕ್ಕೆ ಹಣ ದ್ವಿಗುಣಗೊಳ್ಳುತ್ತದೆ.
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಶೇಕಡಾ 7.4ರಷ್ಟು ಬಡ್ಡಿ ಸಿಗ್ತಿದೆ. ಸುಮಾರು 9.73 ವರ್ಷದಲ್ಲಿ ಹಣ ದ್ವಿಗುಣಗೊಳ್ಳುತ್ತದೆ.
ಅಂಚೆ ಕಚೇರಿ ಪಿಪಿಎಫ್ ಯೋಜನೆಯಲ್ಲಿ ಶೇಕಡಾ 7.1ರಷ್ಟು ಬಡ್ಡಿ ಸಿಗ್ತಿದೆ. ಈ ಬಡ್ಡಿಯಲ್ಲಿ ಹಣ ದ್ವಿಗುಣಗೊಳಿಸಲು 10.14 ವರ್ಷಗಳು ಬೇಕು.