ದೇಶದ ಅತ್ಯುತ್ತಮ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಹೆಸರಿದೆ. ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಂಪನಿ ಅನೇಕ ಯೋಜನೆಗಳನ್ನು ನೀಡ್ತಿದೆ. ಪ್ರತಿ ದಿನ 2ಜಿಬಿ ಡೇಟಾ ನೀಡುವ ಐದು ಯೋಜನೆಗಳನ್ನು ಜಿಯೋ ಗ್ರಾಹಕರಿಗೆ ನೀಡ್ತಿದೆ.
ಕಂಪನಿ 249 ರೂಪಾಯಿ ಪ್ಲಾನ್ ನಲ್ಲಿ ದಿನಕ್ಕೆ 2 ಜಿಬಿ ಡೇಟಾ ನೀಡ್ತಿದೆ. ಜಿಯೋ ನೆಟ್ವರ್ಕ್ ಗೆ ಉಚಿತ ಕರೆ, ಬೇರೆ ನೆಟ್ವರ್ಕ್ ಗೆ 1000 ನಿಮಿಷಗಳ ಕರೆ ಸೌಲಭ್ಯವನ್ನು ನೀಡ್ತಿದೆ. ಪ್ರತಿ ದಿನ 100 ಎಸ್‌ಎಂಎಸ್ ನೀಡುವ ಈ ಪ್ಲಾನ್ ಸಿಂಧುತ್ವ 28 ದಿನಗಳು.
444 ರೂಪಾಯಿ ಪ್ಲಾನ್ ನಲ್ಲಿ ಕೂಡ 2ಜಿಬಿ ಡೇಟಾ ಗ್ರಾಹಕರಿಗೆ ಸಿಗ್ತಿದೆ. ಇದು 56 ದಿನಗಳ ಸಿಂಧುತ್ವ ಹೊಂದಿದೆ. ಬೇರೆ ನೆಟ್ವರ್ಕ್ ಗೆ 2,000 ನಿಮಿಷಗಳ ಉಚಿತ ಕರೆ ಸಿಗ್ತಿದೆ. ಇದ್ರ ಸಿಂಧುತ್ವ 56 ದಿನಗಳು.
ಇನ್ನು 599 ರೂಪಾಯಿ ಪ್ಲಾನ್ ನಲ್ಲೂ ಪ್ರತಿ ದಿನ 2ಜಿಬಿ ಡೇಟಾ ಸಿಗ್ತಿದೆ. 84 ದಿನಗಳ ಸಿಂಧುತ್ವದ ಈ ಪ್ಲಾನ್ ನಲ್ಲಿ ಲೈವ್ ಟು ಲೈವ್ ಕಾಲಿಂಗ್, ಆಫ್ ನೆಟ್ ಕಾಲಿಂಗ್ ಮತ್ತು 100 ಎಸ್‌ಎಂಎಸ್ ಪ್ರತಿದಿನ ಸಿಗಲಿದೆ.