ಜೂನ್ ತಿಂಗಳು ಹರ್ತಿರ ಬರ್ತಿದೆ. ಜೂನ್ ತಿಂಗಳಿನಲ್ಲಿ ಜನಸಾಮಾನ್ಯನಿಗೆ ಸಂಬಂಧಿಸಿದ ಕೆಲ ಬದಲಾವಣೆಯಾಗಲಿದೆ. ಬ್ಯಾಂಕಿಂಗ್, ಆದಾಯ ತೆರಿಗೆ, ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಿಷ್ಯಗಳು ಸೇರಿವೆ.
ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್‌ಎಸ್‌ಸಿ, ಕೆವಿಪಿ ಮತ್ತು ಸುಕನ್ಯಾ ಸಮೃದ್ಧಿಯ ಬಡ್ಡಿದರಗಳಲ್ಲಿ ಬದಲಾವಣೆ ಈ ತಿಂಗಳಿನಲ್ಲಾಗಲಿದೆ. ಸಣ್ಣ ಉಳಿತಾಯ ಯೋಜನೆಗಳ ಹೊಸ ಬಡ್ಡಿದರಗಳನ್ನು ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಬದಲಿಸುತ್ತದೆ. ಮಾರ್ಚ್ 31 ರಂದು ಹೊಸ ಬಡ್ಡಿದರಗಳನ್ನು ಘೋಷಣೆ ಮಾಡಲಾಗಿತ್ತು. ಆದ್ರೆ 24 ಗಂಟೆಗಳಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಜೂನ್ 30ರಂದು ಹೊಸ ಬಡ್ಡಿದರದ ನಿರ್ಧಾರವಾಗಲಿದೆ.
ಬ್ಯಾಂಕ್ ಆಫ್ ಬರೋಡಾ, ಜೂನ್ 1 ರಿಂದ ಚೆಕ್ ಪಾವತಿ ವಿಧಾನವನ್ನು ಬದಲಾಯಿಸಲಿದೆ. ವಂಚನೆ ತಪ್ಪಿಸಲು ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಪಾಸಿಟಿವ್ ಪೇ ಕನ್ಫರ್ಮೇಶನ್ ಇನ್ಮುಂದೆ ಕಡ್ಡಾಯವಾಗಲಿದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಬ್ಯಾಂಕ್ ಗೆ ನೀಡುವಾಗ ಈ ನಿಯಮವನ್ನು ಗ್ರಾಹಕರು ಪಾಲಿಸಬೇಕು.
ಜೂನ್ ಒಂದರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಸದ್ಯ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 809 ರೂಪಾಯಿಯಿದೆ.
ಕೆನರಾ ಬ್ಯಾಂಕ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಜುಲೈ 1 ರಿಂದ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಬದಲಾಗಲಿದೆ. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಐಎಫ್ಎಸ್ಸಿ ಕೋಡ್ ಜೂನ್ 30 ರೊಳಗೆ ನವೀಕರಿಸಲು ಸೂಚಿಸಲಾಗಿದೆ. ಕೆನರಾ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಐಎಫ್ಎಸ್ಸಿ ಕೋಡ್ ಲಭ್ಯವಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಜೂನ್ 1 ರಿಂದ 6 ರವರೆಗೆ ಕಾರ್ಯನಿರ್ವಹಿಸುವುದಿಲ್ಲ. ಜೂನ್ 7 ರಂದು ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಲಿದೆ. ಜೂನ್ 7 ರಿಂದ http://INCOMETAX.GOV.IN ಆಗಿ ಬದಲಾಗಲಿದೆ.