ಗೂಗಲ್ ಆಪ್ನ ಸಹಾಯದಿಂದ ಸಾಕಷ್ಟು ಆಪ್ಗಳನ್ನ ನಾವು ನಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಂಡಿರ್ತೇವೆ. ಆದರೆ ಇದರಲ್ಲಿ ಅನೇಕ ಹೆಸರಾಂತ ಗೇಮಿಂಗ್ ಆಪ್ಗಳು ನಿಮ್ಮ ಮಾಹಿತಿ, ಹಣವನ್ನ ಕದಿಯುವ ಕೆಲಸವನ್ನ ಮಾಡ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿ ಸೋರಿಕೆ ಮಾಡ್ತಿದ್ದ ಅನೇಕ ಆಪ್ಗಳನ್ನ ಬ್ಯಾನ್ ಮಾಡಿದೆ, ಇದರ ಬಳಿಕವೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಇಂತಹ 21 ಡೆಡ್ಲಿ ಆಪ್ಗಳನ್ನ ಗುರುತಿಸಲಾಗಿದೆ. ಈ ಡೆಡ್ಲಿ ಆಪ್ಗಳಲ್ಲಿ ಬಹುತೇಕ ಆಪ್ಗಳು ಗೇಮಿಂಗ್ ಆಪ್ಗಳಾಗಿವೆ. ಇದರಲ್ಲ ಮೂರು ಆಪ್ಗಳನ್ನ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ಇನ್ನುಳಿದ 19 ಆಪ್ಗಳು ನಿಗ್ರಹಣೆಯಲ್ಲಿವೆ.
ಶೂಟ್ ದೆಮ್, ಕ್ರಶ್ ಕಾರ್, ರೋಲಿಂಗ್ ಸ್ಕ್ರಾಲ್, ಹೆಲಿಕಾಪ್ಟರ್ ಅಟ್ಯಾಕ್, ಅಸೇನ್ ಲೆಜೆಂಡ್ -2020 ನ್ಯೂ, ರಗ್ಬಿ ಪಾಸ್, ಫ್ಲೈಯಿಂಗ್ ಸ್ಕೇಟ್ ಬೋರ್ಡ್, ಐರನ್ ಇಟ್, ಶೂಟಿಂಗ್ ರನ್ ಸೇರಿದಂತೆ ಒಟ್ಟು 21 ಆಪ್ಗಳು ಮಾಹಿತಿ ಕದಿಯುವ ಕೆಲಸವನ್ನ ಮಾಡುತ್ತಿವೆ.