ನವದೆಹಲಿ: ವಾಹನಗಳಿಗೆ ತೈಲ ತುಂಬಿಸಿಕೊಳ್ಳುವುದರಲ್ಲಿ ಇನ್ನು ದೊಡ್ಡ ಉಳಿತಾಯವಾಗಲಿದೆ. ಕೋಟಾಕ್ ಮಹೀಂದ್ರಾ ಬ್ಯಾಂಕ್ IOC ಸಹಭಾಗಿತ್ವದಲ್ಲಿ ಇಂಧನ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ.
ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಿಸಿ ತುಪ್ಪವಾಗಿ ಪರಿಣಮಿಸಿವೆ. ಇಂತಹ ಸಂದರ್ಭದಲ್ಲಿ ನಿಮಗೆ ಕೆಲವು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಚಿತವಾಗಿ ನೀಡಿದರೆ ಅಥವಾ ನಿಮಗೆ ಕ್ಯಾಶ್ ಬ್ಯಾಕ್ ನೀಡಿದರೆ ಅನುಕೂಲವಾಗುತ್ತದೆ.
ಹೌದು, ಇದು ನಿಜ. ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವಾಗ ನೀವು ಇಂಧನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಿಮ್ಮ ಹಣವನ್ನು ಉಳಿಸಬಹುದು. ಮಾರುಕಟ್ಟೆಯಲ್ಲಿ ಅನೇಕ ಇಂಧನ ಕ್ರೆಡಿಟ್ ಕಾರ್ಡ್‌ಗಳು ಲಭ್ಯವಿದೆ. ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಶುಕ್ರವಾರ ಇಂಡಿಯನ್ ಆಯಿಲ್ ಕೋಟಾಕ್ ಸಹ-ಬ್ರಾಂಡ್ ಇಂಧನ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ.
ಈ ಟೈ-ಅಪ್‌ನೊಂದಿಗೆ, ಗ್ರಾಹಕರು ಉತ್ತಮ ಲಾಭ ಪಡೆಯಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್ ಮಕ್ಕರ್, ಕೋಟಕ್ ಮಹೀಂದ್ರಾ ಬ್ಯಾಂಕ್ ನೊಂದಿಗಿನ ಒಡನಾಟದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗೆ ಉತ್ತಮ ಮೌಲ್ಯ ಒದಗಿಸುವ ಮೂಲಕ ಅನುಕೂಲವಾಗಲಿದೆ ಎಂದಿದ್ದಾರೆ.
ಈ ಪಾಲುದಾರಿಕೆಯು ಇಂಡಿಯನ್ ಆಯಿಲ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ತಮ್ಮ ಬ್ರ್ಯಾಂಡ್ ವ್ಯಾಪ್ತಿಯನ್ನು ಇನ್ನಷ್ಟು ಬಲಪಡಿಸಲು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ಮಕ್ಕರ್ ಹೇಳಿದರು. ಇಂಡಿಯನ್ ಆಯಿಲ್‌ನ 33,000 ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ 98 ಪ್ರತಿಶತದಷ್ಟು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ವ್ಯಾಲೆಟ್ ಪಾವತಿಗಳನ್ನು ಸ್ವೀಕರಿಸುತ್ತವೆ.