ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಅಷ್ಟೆ ಅಲ್ಲ ಎಷ್ಟೋ ಜನ ಈ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದೀಗ ತುಂಬಾ ಜನ ಕಾಯುತ್ತಿದ್ದ ಅತಿ ವೇಗದ ಎಲೆಕ್ಟ್ರಿಕ್ ಬೈಕ್ ಲೋಕಾರ್ಪಣೆಯಾಗೋದಿಕ್ಕೆ ಸಮಯ ನಿಗದಿಯಾಗಿದೆ.
ಹೌದು, ಅಕ್ಟೋಬರ್ ತಿಂಗಳಿನಲ್ಲಿ ಈ ಬೈಕ್ ಬಿಡುಗಡೆ ಮಾಡುವುದಾಗಿ ಒನ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ನ ಕ್ರೀಡನ್ ಹೇಳಿಕೊಂಡಿದೆ. ಈ ಬೈಕ್ ಒಂದು ಗಂಟೆಗೆ ಸುಮಾರು 95 ಕಿ.ಮೀ. ಸಾಗಬಲ್ಲದು ಎನ್ನಲಾಗಿದೆ. ಈಗಾಗಲೇ ಈ ಬೈಕ್ನ ಪರೀಕ್ಷೆಗಳೆಲ್ಲವನ್ನು ಕಂಪನಿ ಮುಗಿಸಿ ಯಶಸ್ಸು ಕಂಡಿದೆ. ಹೀಗಾಗಿ ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಇನ್ನು ಈ ಬೈಕ್ ದರ ಸುಮಾರು 1.29 ಲಕ್ಷ ಎನ್ನಲಾಗಿದೆ. ಅಲ್ಲದೆ ಮೊದಲ ಹಂತವಾಗಿ ಈ ಬೈಕ್ ಅನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೈಕ್ ಪ್ರಿಯರ ಅಭಿರುಚಿಗೆ ತಕ್ಕಂತೆ ಬೈಕ್ ವಿನ್ಯಾಸ ಮಾಡಲಾಗಿದೆ. ಜೊತೆಗೆ ಸವಾರನ ಸೇಫ್ಟಿಯನ್ನು ಮುಖ್ಯವಾಗಿರಿಸಿಕೊಂಡು ತಯಾರಿಸಲಾಗಿದೆ.