alex Certify ‘ವರ್ಕ್ ಫ್ರಂ ಹೋಂ’ ಮಾಡುತ್ತಿರುವವರು ಇದನ್ನೊಮ್ಮೆ ಓದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವರ್ಕ್ ಫ್ರಂ ಹೋಂ’ ಮಾಡುತ್ತಿರುವವರು ಇದನ್ನೊಮ್ಮೆ ಓದಿ…!

ನೋವೆಲ್ ಕೊರೋನಾ ವೈರಸ್ ಹಾಗೂ ಅದರಿಂದ ಬಚಾವಾಗಲು ಮಾಡಿದ ಲಾಕ್‌ಡೌನ್ ಜಗತ್ತಿನ ಹಲವರ ಜನಜೀವನದ ಸ್ವರೂಪವನ್ನೇ ಬದಲಿಸಿದೆ. ಹಲವರು ಮನೆಯಲ್ಲೇ ಕುಳಿತು ಕೆಲಸ ( ವರ್ಕ್ ಫ್ರಂ ಹೋಂ) ಮಾಡುತ್ತಿದ್ದಾರೆ.‌

ಆದರೆ, ನಿರಂತರವಾಗಿ ಮನೆಯಲ್ಲೇ ಕುಳಿತು ಕೆಲಸ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಡೈರೆಕ್ಟ್ ಅಪ್ಲಾಯನ್ಸಸ್ ಕಂಪನಿ ‘ಸುಸಾನ್’ ಎಂಬ ಡಿಜಿಟಲ್‌ ಮಾಡೆಲ್ ಒಂದನ್ನು ಸಿದ್ಧ ಮಾಡಿ ವಿವರಣೆ ನೀಡಿದೆ. ಇದು ವರ್ಕ್ ಫ್ರಂ ಹೋಂ ಮಾಡುತ್ತಿರುವ ಲಕ್ಷಾಂತರ ಜನರಿಗೆ ಕಿವಿಮಾತು ಇದ್ದಂತಿದೆ.

ಏನಾಗಬಹುದು..?
*ಕಚೇರಿಗೆ ಹೋಗುವುದರಿಂದ ನೌಕರ ಕನಿಷ್ಠ 5 ರಿಂದ 10 ನಿಮಿಷವಾದರೂ ನಡೆಯುತ್ತಾನೆ. ಆದರೆ, ಮನೆಯಲ್ಲೇ ಕೆಲಸ ಮಾಡುವುದರಿಂದ ದಿನಕ್ಕೆ 10 ಹೆಜ್ಜೆಯೂ ನಡೆಯುವುದಿಲ್ಲ. ಇದರಿಂದ ಬೊಜ್ಜು ಬೆಳೆಯುತ್ತದೆ. ಹೊಟ್ಟೆ ಬರುತ್ತದೆ.

*ಮನೆಯಲ್ಲಿ ಆಫೀಸ್ ನಂತೆ ನೇರವಾಗಿ ಕುಳಿತು ಕೆಲಸ ಮಾಡುವುದಿಲ್ಲ. ಇದರಿಂದ ಬೆನ್ನು ಬಾಗುತ್ತದೆ.

*ಇಡೀ ದಿನ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ನೋಡುತ್ತಿರುವುದರಿಂದ ವಿಜನ್ ಸಿಂಡ್ರೋಮ್ ಎಂಬ ಕಾಯಿಲೆ ಬರುತ್ತದೆ. ಅದರಿಂದ ಕಣ್ಣು ಕೆಂಪಾಗುವುದು ಉರಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

*ಹೊರಗಡೆ ಓಡಾಡದೇ ಸ್ವಲ್ಪವೂ ಬಿಸಿಲಿಗೆ ಮೈಯೊಡ್ಡದೇ ಇರುವುದರಿಂದ ವಿಟಮಿನ್ ಡಿ ಹಾಗೂ ವಿಟಮಿನ್ ಡಿ 12 ಕೊರತೆ ಉಂಟಾಗುತ್ತದೆ. ಇದರಿಂದ ಚರ್ಮ ಹೊಳಪು ಕಳೆದುಕೊಳ್ಳುತ್ತದೆ. ಬಿಳುಪುಗಟ್ಟಬಹುದು.

*ನಿರಂತರವಾಗಿ ಕೀ ಬೋರ್ಡ್ ಕುಟ್ಟುವುದರಿಂದ ಕೈ ಬೆರಳುಗಳು ಹಾಗೂ ಕೈಯ್ಯ ಮಣಿಕಟ್ಟಿಗೆ ಹಾನಿಯಾಗುತ್ತದೆ.‌ ಒಮ್ಮೆ ಧಕ್ಕೆಯಾದರೆ ಮತ್ತೆ ಅದು ಸುಧಾರಿಸುವುದಿಲ್ಲ.

ಹೀಗೆ ಮಾಡಿ:
‘ಸುಸಾನ್’ ಮಾದರಿಯಲ್ಲಿ ಆಗಬಾರದು ಎಂದಾದಲ್ಲಿ ನೀವು ಹೀಗೆ ಮಾಡಿ ಎಂದು ಸಲಹೆ ನೀಡಲಾಗಿದೆ.‌

1-ಕಚೇರಿಯ ಕೆಲಸ ಹಾಗೂ ಮನೆಗೆಲಸವನ್ನು ಒಟ್ಟೊಟ್ಟಿಗೇ ಮಾಡಬೇಡಿ. ಯಾವುದಕ್ಕೆ ಎಷ್ಟು ಸಮಯ ಎಂದು ನಿಗದಿ ಮಾಡಿಕೊಳ್ಳಿ.

2-ಪ್ರತಿ ದಿನ ವ್ಯಾಯಾಮ ಮಾಡಿ, ಬಾಡಿ ಫಿಟ್ನೆಸ್ ಬಗ್ಗೆ ಗಮನ ಹರಿಸಿ

3-ತಡ ರಾತ್ರಿವರೆಗೆ ನಿದ್ರೆಗೆಡಬೇಡಿ ಕನಿಷ್ಠ 7 ರಿಂದ 8 ತಾಸು ನಿದ್ರೆ ಮಾಡಿ.

4- ಲ್ಯಾಪ್‌ಟಾಪ್, ಮೊಬೈಲ್ ಬಿಟ್ಟು ಕನಿಷ್ಠ ಒಂದೆರಡು ತಾಸು ದೂರವಿರಿ. ಮನೆಯವರೊಟ್ಟಿಗೆ ಕಾಲ ಕಳೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...