
ವಾಟ್ಸಾಪ್ನ ಪ್ರೈವಸಿ ಪಾಲಿಸಿಯನ್ನ ಕಂಡ ಬಳಿಕ ಬಳಕೆದಾರರು ಟೆಲಿಗ್ರಾಮ್ ಹಾಗೂ ಸಿಗ್ನಲ್ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳತ್ತ ಹೆಚ್ಚಿನ ಒಲವನ್ನ ತೋರಿಸುತ್ತಿದ್ದಾರೆ. ಹೀಗಾಗಿ ಕಳೆದ ವಾರದಿಂದ ಸಿಗ್ನಲ್ ಹಾಗೂ ಟೆಲಿಗ್ರಾಂ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ.
ಫೇಸ್ಬುಕ್ಗೆ ಗ್ರಾಹಕರ ಮಾಹಿತಿಯನ್ನ ರವಾನಿಸುವ ವಾಟ್ಸಾಪ್ನ ಷರತ್ತನ್ನ ಆಡಿಕೊಂಡಿರುವ ಟೆಲಿಗ್ರಾಂ, ವಾಟ್ಸಾಪ್ ಬಗ್ಗೆ ಮೀಮ್ಸ್ ಒಂದನ್ನ ಹರಿಬಿಟ್ಟಿದೆ.
ಟೆಲಿಗ್ರಾಂ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಜಿಐಎಫ್ನ ಶೇರ್ ಮಾಡಿದ್ದು ಇದರಲ್ಲಿ ಕೋಫಿನ್ ಡ್ಯಾನ್ಸರ್ಸ್ ವಾಟ್ಸಾಪ್ ಷರತ್ತುಗಳನ್ನ ಶವಪೆಟ್ಟಿಗೆಯಲ್ಲಿಟ್ಟು ಡ್ಯಾನ್ಸ್ ಮಾಡುವಂತೆ ಎಡಿಟ್ ಮಾಡಲಾಗಿದೆ. ಕೋಫಿನ್ ಡ್ಯಾನಸ್ ಅಂತ್ಯಕ್ರಿಯೆ ವೇಳೆ ನೃತ್ಯ ಮಾಡ್ತಾರೆ. ಇದೀಗ ಈ ಮೀಮ್ಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.