alex Certify ಮೊಬೈಲ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಸೇವಾ ಶುಲ್ಕ ಹೆಚ್ಚಳ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಸೇವಾ ಶುಲ್ಕ ಹೆಚ್ಚಳ ಸಾಧ್ಯತೆ

ಮುಂಬೈ: ಮುಂದಿನ ಒಂದು ವರ್ಷದಲ್ಲಿ ಪ್ರತಿ ಗ್ರಾಹಕರಿಂದ ಬರುವ ಸರಾಸರಿ ಆದಾಯದಲ್ಲಿ ಕನಿಷ್ಠ ಶೇಕಡ 25 ರಷ್ಟು ಹೆಚ್ಚಳ ಮಾಡಿಕೊಳ್ಳುವಂತೆ ದೂರ ಸಂಪರ್ಕ ಕಂಪನಿಗಳಿಗೆ ರೇಟಿಂಗ್ ಸಂಸ್ಥೆ ಕ್ರಿಸಿಲ್ ತಿಳಿಸಿದೆ.

ದೂರಸಂಪರ್ಕ ಕಂಪನಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದು, ಸರಾಸರಿ ಆದಾಯ ಹೆಚ್ಚಳಕ್ಕೆ ಕಂಪನಿಗಳು ಮುಂದಾದರೆ ಮೊಬೈಲ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಆಗುತ್ತದೆ.

ದೂರಸಂಪರ್ಕ ಕಂಪನಿಗಳು ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳಕ್ಕೆ ಪ್ರತಿಯಾಗಿ ತೀರಾ ಕಡಿಮೆ ಪ್ರಮಾಣದ ಆದಾಯವನ್ನು ಪಡೆಯುತ್ತಿವೆ ಎನ್ನಲಾಗಿದೆ. 2019 ರ ಡಿಸೆಂಬರ್ ನಲ್ಲಿ ದೂರಸಂಪರ್ಕ ಸೇವೆಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ಈಗ ಮತ್ತೊಮ್ಮೆ ಸೇವಾ ಶುಲ್ಕ ಹೆಚ್ಚಿಸಬೇಕು ಮತ್ತು ಗ್ರಾಹಕರ ಸಂಖ್ಯೆಯನ್ನು ಕೂಡ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಲಾಗಿದ್ದು, ಇದಾದ ನಂತರದಲ್ಲೇ ಕಂಪನಿಗಳು 5 ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...