ಕೊರೊನಾವೈರಸ್ ಸಾಂಕ್ರಾಮಿಕವು ಹೊಸ ಹೊಸ ಆಲೋಚನೆಗಳನ್ನು ಹೊಂದಿರುವ ಉತ್ಪನ್ನ ಹೊರಬರಲು ಅವಕಾಶಮಾಡಿಕೊಟ್ಟಿದೆ.
ಹೈದ್ರಾಬಾದ್ ಹನಂಕೊಂಡ ವಾರಂಗಲ್ನ ಸಣ್ಣ ಚಹಾ ಅಂಗಡಿಯವರು ‘ಕೊರೊನಾ ಸ್ಪೆಷಲ್ ಟೀ’ ಮಾರಾಟ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅವರು ಮಾಡುವ ಕೊರೊನಾ ಚಹಾ ಕುಡಿಯಲು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಹನಮಕೊಂಡ ರಾಮ್ ನಗರದಲ್ಲಿ ಟಿಫಿನ್ ಸೆಂಟರ್ ನಡೆಸುತ್ತಿದ್ದು, ಅವರು ಶುಂಠಿ, ದಾಲ್ಚಿನ್ನಿ ಮತ್ತು ಇತರ ಪದಾರ್ಥಗಳನ್ನು ಬಳಸಿ ಚಹಾವನ್ನು ತಯಾರಿಸುತ್ತಿದ್ದಾರೆ, ಅದು ಈಗ ಜನಪ್ರಿಯವಾಗಿದೆ.
ಪ್ರತಿ ಚಹಾ ಕಪ್ಗೆ 10 ರೂ. ನಿಗದಿಪಡಿಸಿದ್ದು, ಚಹಾವನ್ನು ರುಚಿ ನೋಡಿದ ಕೆಲವರು ಚಹಾ ಕುಡಿದ ನಂತರ ನೋಯುತ್ತಿದ್ದ ತಮ್ಮ ಗಂಟಲಿಗೆ ಪರಿಹಾರ ಕಂಡುಕೊಂಡಿದ್ದಾರಂತೆ.
ಈ ಮೊದಲು ದಿನದಲ್ಲಿ 50 ಟೀ ಮಾರಾಟ ಮಾಡುತ್ತಿದ್ದು, ಆದರೆ ಈಗ ದಿನಕ್ಕೆ 600 ಟೀ ಮಾರಾಟ ಮಾಡುತ್ತಿರುವುದಾಗಿ ಟೀ ಶಾಪ್ ಮಾಲೀಕರು ಹೇಳಿಕೊಂಡಿದ್ದಾರೆ.