
ನವದೆಹಲಿ: ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಐಟಿ ವಲಯದ ಪ್ರಮುಖ ಕಂಪನಿಗಳಲ್ಲಿ ನೇಮಕಾತಿ ಆರಂಭವಾಗಿದೆ.
ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಹೆಚ್.ಸಿ.ಎಲ್. ಟೆಕ್ನಾಲಜೀಸ್ ಒಂದು ಲಕ್ಷಕ್ಕೂ ಹೆಚ್ಚು ಟೆಕ್ಕಿಗಳನ್ನು ನೇಮಿಸಿಕೊಳ್ಳಲಿವೆ. ಈ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ಸಾಲಿನಲ್ಲಿ 1.20 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿವೆ.
ಐಟಿ ವಲಯದಲ್ಲಿ ಉದ್ಯೋಗದ ಬೇಡಿಕೆ ಹೆಚ್ಚಾಗಿರುವುದರಿಂದ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಐಟಿ ವಲಯದಲ್ಲಿ ಉದ್ಯೋಗಿಗಳ ವಲಸೆ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಅಗತ್ಯಕ್ಕಿಂತಲೂ ಹೆಚ್ಚು ಉದ್ಯೋಗಿಗಳ ನೇಮಕಾತಿ ಕೈಗೊಳ್ಳಲಾಗಿದೆ. ಟಿಸಿಎಸ್ ನಲ್ಲಿ ಕಳೆದ ಆರು ತಿಂಗಳಲ್ಲಿ 43,000 ಹೊಸಬರಿಗೆ ಉದ್ಯೋಗ ನೀಡಲಾಗಿದೆ.