ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಯಾಂತ್ರೀಕರಣ ಕಾರ್ಯವು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ; ಟೆಕ್ ದಿಗ್ಗಜರಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್, ಟೆಕ್ ಮಹಿಂದ್ರಾ, ಕಾಗ್ನಿಜ಼ಾಂಟ್ 2022ರ ವೇಳೆಗೆ 3 ದಶಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಲಿವೆ. ಈ ಮೂಲಕ ಸಂಬಳದ ರೂಪದಲ್ಲಿ ಆಗುತ್ತಿದ್ದ ವೆಚ್ಚದಲ್ಲಿ ಈ ಕಂಪನಿಗಳಿಗೆ 100 ಶತಕೋಟಿಯಷ್ಟು ಉಳಿತಾಯವಾಗಲಿದೆ.
ಚಿತ್ರದಲ್ಲಿರುವ ಹುಲಿಯನ್ನು ಪತ್ತೆ ಮಾಡಬಲ್ಲಿರಾ…?
ಮೇಲ್ಕಂಡ ಐಟಿ ಸಂಸ್ಥೆಗಳು ಒಟ್ಟಾರೆಯಾಗಿ 16 ದಶಲಕ್ಷ ಮಂದಿಗೆ ಉದ್ಯೋಗ ಕೊಟ್ಟಿದ್ದು, ಇವರ ಪೈಕಿ ಒಂಬತ್ತು ದಶಲಕ್ಷ ಮಂದಿ ಬಿಪಿಓನಂಥ ಕಡಿಮೆ ಕೌಶಲ್ಯದ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಾಸ್ಕಾಂ ತಿಳಿಸಿದೆ.
ಮನ ಮೆಚ್ಚುವಂತಿದೆ ಮಹಿಳಾ ಚಾಲಕಿ ಮಾಡುತ್ತಿರುವ ಕಾರ್ಯ
ಯಾಂತ್ರೀಕರಣ ಅಥವಾ ಆರ್‌ಪಿಎಯಿಂದಾಗಿ ಕಡಿಮೆ ಕೌಶಲ್ಯ ಬಯಸುವ ಬಿಪಿಓ ಕ್ಷೇತ್ರದ ಈ 9 ದಶಲಕ್ಷ ನೌಕರರಲ್ಲಿ, 3 ದಶಲಕ್ಷ ನೌಕರರನ್ನು 2022ರ ವೇಳೆಗೆ ತೆಗೆದುಹಾಕಲಾಗುವುದು. ಆರ್‌ಪಿಎ ಒಂದರಿಂದಲೇ ಸುಮಾರು 0.7 ದಶಲಕ್ಷ ಉದ್ಯೋಗಗಳನ್ನು ಆರ್‌ಪಿಎ ತಿಂದುಹಾಕಲಿದ್ದು, ಇದೇ ವೇಳೆ ತಾಂತ್ರಿಕ ಮೇಲ್ದರ್ಜೆ ಹಾಗೂ ದೇಶೀ ಐಟಿ ಕಂಪನಿಗಳಿಂದ ಕೌಶಲ್ಯವರ್ಧನೆಯಿಂದಾಗಿ ಮಿಕ್ಕ ಉದ್ಯೋಗಗಳು ಖೋತಾ ಆಗಲಿವೆ.