ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಸಿಸ್ ಹಣಕಾಸು ವರ್ಷದ ಪ್ರಸಕ್ತ ತ್ರೈಮಾಸಿಕದಲ್ಲಿ ಸುಮಾರು 11.781 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪನಿಗಳ ಟೆಕ್ಕಿಗಳ ಸಂಖ್ಯೆಯಲ್ಲಿ 13,863 ಉದ್ಯೋಗಿಗಳ ಕಡೆತಗೊಳಿಸಲಾಗಿತ್ತು. ತೃತೀಯ ಥೈಮಾಸಿಕದಲ್ಲಿ ಟಿಸಿಎಸ್ ನಲ್ಲಿ 5680, ಇನ್ಫೋಸಿಸ್ ನಲ್ಲಿ 6101 ಉದ್ಯೋಗಿಗಳ ಕಡಿತ ಮಾಡಲಾಗಿದೆ.
ವೆಚ್ಚ ಸರಿದೂಗಿಸುವುದು ಸೇರಿ ಅನೇಕ ಕಾರಣಗಳಿಂದ ಹಲವಾರು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿವೆ. ಭಾರಿ ಸಂಖ್ಯೆಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಎರಡು ಕಂಪನಿಗಳ ಒಟ್ಟು ಸಂಖ್ಯೆಯು ವರ್ಷದಿಂದ ವರ್ಷಕ್ಕೆ 34,851 ರಷ್ಟು ಕಡಿಮೆಯಾಗಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಿಂದ TCS ನಲ್ಲಿ 10,669 ಮತ್ತು ಇನ್ಫೋಸಿಸ್ನಲ್ಲಿ 24,182 ರಷ್ಟು ಜನರ ಸಂಖ್ಯೆ ಕಡಿಮೆಯಾಗಿದೆ.