ಭಾರತದ ನಂಬರ್ 1 ಸಾಫ್ಟ್ವೇರ್ ರಫ್ತು ಸಂಸ್ಥೆ ಟಾಟಾ ಗ್ರೂಪ್ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಇದೀಗ ವಿಶ್ವದ ನಂಬರ್ 1 ಸಾಫ್ಟ್ವೇರ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಮವಾರ ಟಿಸಿಎಸ್ ಮಾರುಕಟ್ಟೆ ಮೌಲ್ಯ 169.9 ಬಿಲಿಯನ್ ಡಾಲರ್ಗೆ ಏರಿಕೆ ಕಂಡಿದ್ದು ಈ ಮೂಲಕ 168.57 ಬಿಲಿಯನ್ ಡಾಲರ್ ಹೊಂದಿದ್ದ ಆಸೆಂಚರ್ ಐಟಿ ಸಂಸ್ಥೆಯನ್ನ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೆ ಏರಿದೆ. ಇದು ಮಾತ್ರವಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್ ಬಳಿಕ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿರುವ ಕಂಪನಿ ಎಂಬ ಕೀರ್ತಿಗೂ ಟಿಸಿಎಸ್ ಪಾತ್ರವಾಗಿದೆ.
ಡಿಸೆಂಬರ್ 31,2020ರ 3ನೇ ತ್ರೈಮಾಸಿಕದಲ್ಲಿ ಟಿಸಿಎಸ್ 8701 ಕೋಟಿ ರೂಪಾಯಿ ಏಕೀಕೃತ ನಿವ್ವಳ ಲಾಭ ಗಳಿಸಿತ್ತು. ಬಿಎಸ್ಇನಲ್ಲಿ ಟಿಸಿಎಸ್ ಷೇರು 3287.40 ರೂಪಾಯಿ ಟ್ರೆಂಡ್ ಆಗಿದ್ದು 0.45ರಷ್ಟು ಇಳಿಕೆ ಕಂಡಿದೆ.