ಟಾಟಾ ಗ್ರೂಪ್ನ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿಯಾಗಿ ಹೊರ ಹೊಮ್ಮಿದೆ. ಟಿಸಿಎಸ್ ಸೋಮವಾರ ಅಸೆಂಚರ್ ಹಿಂದಿಕ್ಕುವ ಮೂಲಕ ಮೊದಲ ಸ್ಥಾನಕ್ಕೇರಿದೆ. ಟಿಸಿಎಸ್ ಮಾರುಕಟ್ಟೆ ಕ್ಯಾಪ್ ಸುಮಾರು 12,43,540.29 ಕೋಟಿ ರೂಪಾಯಿ ದಾಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಂತರ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿದ ಕಂಪನಿಯ ದಾಖಲೆಯನ್ನು ಟಿಸಿಎಸ್ ಹೊಂದಿದೆ.
2018 ರಲ್ಲಿ ಐಬಿಎಂ ಅಗ್ರ ಕಂಪನಿಯಾಗಿತ್ತು. ಆ ಸಮಯದಲ್ಲಿ ಐಬಿಎಂನ ಒಟ್ಟು ಆದಾಯ ಟಿಸಿಎಸ್ ಗಿಂತ ಸುಮಾರು ಶೇಕಡಾ 300 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷ ಏಪ್ರಿಲ್ನಲ್ಲಿ ಟಿಸಿಎಸ್ನ ಮಾರುಕಟ್ಟೆ ಮೌಲ್ಯ 100 ಬಿಲಿಯನ್ ದಾಟಿತ್ತು. ಜನವರಿ 20 ರಂದು, ಟಿಸಿಎಸ್ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಅಂದಿನಿಂದ ಸ್ಟಾಕ್ ಸ್ಥಿರವಾಗಿ ಏರುತ್ತಿದೆ. ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ಈ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ಲಾಭ 8,701 ಕೋಟಿ ರೂಪಾಯಿಗಳಾಗಿದೆ.
ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 4.7 ರಷ್ಟು ಏರಿಕೆಯಾದ್ದರೆ, ಕಂಪನಿಯ ಆದಾಯವು ವಾರ್ಷಿಕ ಆಧಾರದ ಮೇಲೆ ಶೇಕಡಾ 5.5 ರಷ್ಟು ಹೆಚ್ಚಾಗಿದೆ.