ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿದ ವಾಹನ ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಹನ ತೆರಿಗೆ ಪಾವತಿ ಅವಧಿ ವಿಸ್ತರಣೆ ಮಾಡಲಾಗಿದೆ.
ಕೊರೋನಾ ಎರಡನೇ ಅಲೆಯಿಂದ ವಾಣಿಜ್ಯ ವಾಹನ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸುವ ಅವಧಿಯನ್ನು ಜೂನ್ 30 ರವರೆಗೆ ಸಾರಿಗೆ ಇಲಾಖೆ ವಿಸ್ತರಿಸಿದೆ.
ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಬಗ್ಗೆ ಮಾಹಿತಿ ನೀಡಿ, ವಾಣಿಜ್ಯ ವಾಹನ ಮಾಲೀಕರ ಅನುಕೂಲಕ್ಕಾಗಿ ಮೋಟಾರು ವಾಹನ ತೆರಿಗೆ ಕಾಯ್ದೆ ನಿಯಮ ಸಡಿಲಗೊಳಿಸಿದೆ. ಎಲ್ಲಾ ನೋಂದಾಯಿತ ಸಾರಿಗೆ ವಾಹನಗಳಿಗೆ(ಹೊಸ ವಾಹನಗಳ ನೋಂದಣಿ ಹೊರತಾಗಿ) ಅನ್ವಯವಾಗುವಂತೆ ಜೂನ್ 30 ರವರೆಗೆ ದಂಡ ರಹಿತವಾಗಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.