ದೀಪಾವಳಿಗೂ ಮೊದಲೇ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಖುಷಿ ಸುದ್ದಿಯನ್ನು ನೀಡಿದೆ. ಸಿಬಿಡಿಟಿ ತನ್ನ 38.11 ಲಕ್ಷ ತೆರಿಗೆದಾರರಿಗೆ 1,23,474 ಕೋಟಿ ರೂಪಾಯಿಗಿಂತಲೂ ಹೆಚ್ಚು ರಿಫಂಡ್ ಜಾರಿ ಮಾಡಿದೆ.
ಏಪ್ರಿಲ್ 1ರಿಂದ ಅಕ್ಟೋಬರ್ 13ರ ಅವಧಿಯಲ್ಲಿ ಹಣವನ್ನು ಮರು ಪಾವತಿ ಮಾಡಲಾಗಿದೆ. ಇದ್ರಲ್ಲಿ 33442 ಕೋಟಿ ವೈಯಕ್ತಿಕ ಸಾಲ ಮತ್ತು 90,032 ಕೋಟಿ ರೂಪಾಯಿ ಕಾರ್ಪೋರೇಟ್ ತೆರಿಗೆಯನ್ನು 1.89 ಲಕ್ಷ ತೆರಿಗೆದಾರರಿಗೆ ಮರು ಪಾವತಿ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ ನಂತ್ರ ಮರುಪಾವತಿ ಪ್ರಕ್ರಿಯೆ ವೇಗ ಪಡೆದಿದೆ ಎಂದು ತೆರಿಗೆ ಇಲಾಖೆ ಹೇಳಿದೆ. ಹಾಗೆ ತೆರಿಗೆ ರಿಫಂಡ್ ಗೆ ವಿನಂತಿ ಮಾಡುವ ಅಗತ್ಯವಿಲ್ಲವೆಂದಿದೆ.
ಈವರೆಗೂ ತೆರಿಗೆ ಮರುಪಾವತಿ ಲಾಭ ಪಡೆಯದ ಜನರು ಇ-ಮೇಲ್ ಮೂಲಕ ಮಾಹಿತಿ ಪಡೆಯಬೇಕು. ತೆರಿಗೆ ಮರುಪಾವತಿ ಬಗ್ಗೆ ನೀವು ಆನ್ಲೈನ್ ನಲ್ಲಿಯೇ ಮಾಹಿತಿ ಪಡೆಯಬಹುದು. ಮೊದಲು ಆದಾಯ ತೆರಿಗೆ ಇಲಾಖೆ ವೆಬ್ಸೈಟ್ www.incometaxindiaefiling.gov.in. ಗೆ ಹೋಗಬೇಕು. ಅಲ್ಲಿ ಐಡಿ, ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಬೇಕು. ವ್ಯೂವ್ ರಿಟರ್ನ್ ಅಥವಾ ಫಾರ್ಮ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಇನ್ಕಂಮ್ ಟ್ಯಾಕ್ಸ್ ರಿಟರ್ನ್ ಮೇಲೆ ಕ್ಲಿಕ್ ಮಾಡಬೇಕು. ದಾಖಲಾತಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, ಅದು ಹೈಪರ್ಲಿಂಕ್ ಆಗಿರುತ್ತದೆ. ಎಫ್ವೈ 2019-20, ಮೌಲ್ಯಮಾಪನ ವರ್ಷ ಎವೈ 2020-21 ಆಯ್ಕೆ ಮಾಡಬೇಕು. ಅಲ್ಲಿ ಕೆಳಗೆ ಆದಾಯ ತೆರಿಗೆ ಮರುಪಾವತಿ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಮರುಪಾವತಿ ದಿನಾಂಕ ಮತ್ತು ಹಣ ಕಾಣಿಸುತ್ತದೆ.