ನವದೆಹಲಿ: ತೆರಿಗೆ ಅಕ್ರಮ ಎಸಗಿ ಸಿಕ್ಕಿಬಿದ್ದರೆ ನಷ್ಟವಾಗಿದ್ದರೂ ಕೂಡ ತೆರಿಗೆ ಪಾವತಿಸಬೇಕಿದೆ. ಕೇಂದ್ರ ಸರ್ಕಾರ ತೆರಿಗೆ ಕುರಿತಾದ ಗೊಂದಲಕ್ಕೆ ತೆರೆದಿದ್ದು, ತೆರಿಗೆ ವಂಚನೆ ಎಸಗುವವರಿಗೆ ಕ್ಷಮೆ ಇರುವುದಿಲ್ಲ ಎನ್ನಲಾಗಿದೆ.
ತೆರಿಗೆ ದಾಳಿ ಸಂದರ್ಭದಲ್ಲಿ ಪತ್ತೆಯಾಗುವ ಅಕ್ರಮ ಆಸ್ತಿಯಿಂದ ತಮ್ಮ ಹಳೆಯ ನಷ್ಟ ಕಳೆಯುವ ಅವಕಾಶವನ್ನು ತೆರಿಗೆ ವಂಚಕರಿಗೆ ನೀಡುವುದಿಲ್ಲವೆಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ತೆರಿಗೆ ದಾಳಿ ಸಂದರ್ಭದಲ್ಲಿ ಪತ್ತೆಯಾದ ಅಕ್ರಮ ಆಸ್ತಿ, ಅಘೋಷಿತ ಆಸ್ತಿಯಿಂದ ಹಳೆಯ ನಷ್ಟವನ್ನು ಕಳೆದು ಬಾಕಿ ಮೊತ್ತಕ್ಕೆ ಮಾತ್ರ ತೆರಿಗೆ ಮತ್ತು ದಂಡ ಕಟ್ಟುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಗೊಂದಲಗಳಿಗೆ ತೆರೆ ಎಳೆಯಲು ಆದಾಯ ತೆರಿಗೆ ದಾಳಿ ವೇಳೆ ಪತ್ತೆಯಾದ ಅಕ್ರಮ ಆಸ್ತಿಯಿಂದ ಹಳೆಯ ನಷ್ಟವನ್ನು ಕಳೆಯಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತೆರಿಗೆ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ತೆರಿಗೆ ಅಕ್ರಮ ಎಸಗಿ ಸಿಕ್ಕಿಬಿದ್ದರೆ ನಷ್ಟವಾಗಿದ್ದರೂ ಕೂಡ ತೆರಿಗೆ ಪಾವತಿಸಬೇಕಿದೆ ಎನ್ನಲಾಗಿದೆ.