![](https://kannadadunia.com/wp-content/uploads/2019/11/senior_citizen-04-20170130-AC-kYqC-621x414@LiveMint_1573033193394.jpg)
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ ನೀಡಲಾಗಿದೆ.
75 ವರ್ಷ ಮೇಲ್ಪಟ್ಟವರು ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಿಲ್ಲ. ಪಿಂಚಣಿ ಬಡ್ಡಿ ಆದಾಯ ಹೊರತು ಬೇರೆ ಆದಾಯ ಇಲ್ಲದವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಬ್ಯಾಂಕಿನಿಂದಲೇ ಆದಾಯಕ್ಕೆ ತಕ್ಕಂತೆ ತೆರಿಗೆ ಕಡಿತ ಮಾಡಲಾಗುವುದು. ಇತರರು ಐಟಿಆರ್ ಸಲ್ಲಿಸಬೇಕಿದೆ.
ದೇಶ 75 ನೇ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿದ್ದು, 75 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ತೆರಿಗೆ ಸಂಬಂಧಿತ ಕಿರಿಕಿರಿಗಳನ್ನು ನಿವಾರಣೆ ಮಾಡಲಾಗುವುದು ಎಂದು ಹೇಳಲಾಗಿದೆ.