ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಮಾಡ್ತಿರುವವರ ಸಂಖ್ಯೆ ಹೆಚ್ಚಾದ ಕಾರಣ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಟಾಟಾ ಸ್ಕೈ ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಈಗ ಗ್ರಾಹಕರಿಗೆ ಉಚಿತ ವೈ-ಫೈ ರೋಟರ್ ನೀಡ್ತಿದೆ.
ಮಾಹಿತಿ ಪ್ರಕಾರ, ಟಾಟಾ ಸ್ಕೈ ಹೊಸ ಗ್ರಾಹಕರನ್ನು ಸೆಳೆಯಲು ಈ ಯೋಜನೆ ಬಿಡುಗಡೆ ಮಾಡಿದೆ. ಹೊಸ ಗ್ರಾಹಕರಿಗೆ ಉಚಿತ ರೋಟರ್ ನೀಡುವ ಘೋಷಣೆ ಮಾಡಿದೆ. ಅಧಿಕೃತ ವೆಬ್ಸೈಟ್ ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ವರ್ಕ್ ಫ್ರಂ ಹೋಮ್ ಗಮನದಲ್ಲಿಟ್ಟುಕೊಂಡಿರುವ ಎಲ್ಲ ಟೆಲಿಕಾಂ ಕಂಪನಿಗಳು ವೇಗದ ಇಂಟರ್ನೆಟ್ ಡೇಟಾಕ್ಕೆ ಮಹತ್ವ ನೀಡ್ತಿವೆ. ಟಾಟಾ ಸ್ಕೈ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಟಾಟಾ ಸ್ಕೈ 300 ಎಂಬಿಪಿಎಸ್ ವೇಗದ ಸೇವೆ ನೀಡ್ತಿದೆ.
ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ದಾಖಲೆ ಬರೆದ ಪೆಟ್ರೋಲ್-ಡೀಸೆಲ್ ದರ 100 ರೂ. ಸನಿಹಕ್ಕೆ
ಕಂಪನಿ ತನ್ನೆಲ್ಲ ಹೊಸ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಗಾಗಿ ಉಚಿತ ಇನ್ಸ್ಟಾಲೇಷನ್ ನೀಡ್ತಿದೆ. ಕೊರೊನಾದಿಂದಾಗಿ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಟೆಲಿಕಾಂ ಕಂಪನಿಗಳು ಒಂದಕ್ಕಿಂತ ಹೆಚ್ಚು ಬ್ರಾಡ್ ಬ್ಯಾಂಡ್ ಕೊಡುಗೆಗಳನ್ನು ನೀಡ್ತಿವೆ.