![](https://kannadadunia.com/wp-content/uploads/2021/01/Screenshot_2021_0125_110934-735x400-1.png)
ಭಾರತದಲ್ಲಿ ಮಾಡೆರ್ನಾ ಲಸಿಕೆ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳಿಸಲು ಟಾಟಾ ಮೆಡಿಕಲ್ ಹಾಗೂ ಡಯಾಗ್ನೋಸ್ಟಿಕ್ಸ್ ಭಾರತದ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಜೊತೆ ಕೈ ಜೋಡಿಸಬಹುದು ಎನ್ನಲಾಗಿದೆ. ಈ ವಿಚಾರ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಎನ್ನಲಾಗಿದೆ.
ಫೈಜರ್ ಲಸಿಕೆಯಂತಲ್ಲದೇ ಈ ಮಾಡೆರ್ನಾ ಲಸಿಕೆಯನ್ನ ಸಾಮಾನ್ಯ ಫ್ರಿಜ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಹೀಗಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಇಂತಹ ಲಸಿಕೆಗಳು ಹೆಚ್ಚು ಸೂಕ್ತ ಎನಿಸಲಿವೆ. ಮಾಡೆರ್ನಾದ ಕೊನೆಯ ಹಂತದ ಅಧ್ಯಯನದ ಫಲಿತಾಂಶವು ನವೆಂಬರ್ನಲ್ಲಿ ಪ್ರಕಟವಾಗಿದ್ದು 94.1 ಪ್ರತಿಶತದಷ್ಟು ಪರಿಣಾಮಕಾರತ್ವವನ್ನ ತೋರಿಸಿದೆ. ಭಾರತದಲ್ಲಿ ಪ್ರಸ್ತುತ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನ ಬಳಕೆ ಮಾಡಲಾಗುತ್ತಿದೆ.