ಶೀಘ್ರವೇ ಏರ್ ಇಂಡಿಯಾ ಹಾಗೂ ವಿಸ್ತಾರ ಏರ್ ಲೈನ್ಸ್ ವಿಲೀನಗೊಳಿಸಲಾಗುವುದು ಎಂದು ಟಾಟಾ ಗ್ರೂಪ್ ಘೋಷಣೆ ಮಾಡಿದೆ. ಎರಡೂ ಏರ್ ಲೈನ್ಸ್ ವಿಲೀನಗೊಳಿಸಲಾಗುತ್ತದೆ. 2024ರ ಮಾರ್ಚ್ ಒಳಗೆ ಎರಡು ಏರ್ ಲೈನ್ಸ್ ಗಳನ್ನು ವಿಲೀನಗೊಳಿಸುವುದಾಗಿ ಟಾಟಾ ಗ್ರೂಪ್ ಘೋಷಣೆ ಮಾಡಿದೆ.
ಮಾರ್ಚ್ 2024 ರೊಳಗೆ ವಿಸ್ತಾರಾ ಮತ್ತು ಏರ್ ಇಂಡಿಯಾದ ವಿಲೀನ ಮಾಡುವುದಾಗಿ ಮಂಗಳವಾರ ಪ್ರಕಟಿಸಿದೆ. ಟಾಟಾ ಸಮೂಹವು ವಿಸ್ತಾರಾದಲ್ಲಿ 51 ಶೇಕಡಾ ಪಾಲನ್ನು ಹೊಂದಿದೆ ಮತ್ತು ಉಳಿದ 49 ಶೇಕಡಾ ಷೇರುಗಳು ಸಿಂಗಾಪುರ್ ಏರ್‌ಲೈನ್ಸ್(SIA) ನೊಂದಿಗೆ ಇದೆ.
ಟಾಟಾ ಗ್ರೂಪ್ ವಿಸ್ತಾರಾ ಮತ್ತು ಏರ್ ಇಂಡಿಯಾದ ವಿಲೀನವನ್ನು ಘೋಷಿಸಿದ ವಿಸ್ತಾರಾ ಸಿಇಒ ವಿನೋದ್ ಕಣ್ಣನ್, ಏಕೀಕರಣ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.